ನರಹಂತಕ ಹುಲಿ ಹತ್ಯೆಗೆ ಒತ್ತಾಯಿಸಿ ಗೋಣಿಕೊಪ್ಪ- ಮೈಸೂರು ಹೆದ್ದಾರಿ ತಡೆ

IMG-20210310-WA0083
Published on

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮೂವರನ್ನು ಬಲಿ ತೆಗೆದುಕೊಂಡಿರುವ ನರಹಂತಕ ಹುಲ್ಲಿ ಕೊಲ್ಲಲು ಆಗ್ರಹಿಸಿ ಬುಧವಾರ ಗೋಣಿಕೊಪ್ಪ... ಮೈಸೂರು ಮಾರ್ಗದ ಮತ್ತಿಗೋಡಿನಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದರು.

ಸೋಮವಾರ, ಮಂಗಳವಾರ ಹುದಿಕೇರಿ... ಶ್ರೀಮಂಗಲ ಮಾರ್ಗದ ಬೆಳ್ಳೂರಿನಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದ್ದರು. ತಕ್ಷಣ ಹುಲಿ ಕೊಂದು ತಮ್ಮ ಮುಂದೆ ಮೃತದೇಹ ಹಾಜರು ಪಡಿಸಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದ್ದರು. ಅರಣ್ಯ ಇಲಾಖೆ ತಂಡ ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಹೀಗಿದ್ದರೂ, ನರಹಂತಕ ಹುಲಿ ಸೆರೆ ಅಥವಾ ಕೊಲ್ಲಲು ಸಾಧ್ಯವಾಗಿಲ್ಲ.

ನರಹಂತಕ ಹುಲಿ ವಿರುದ್ಧದ ಹೋರಾಟ ತೀವ್ರಗೊಳಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ರಾಜ್ಯ ಹೆದ್ದಾರಿಗೆ ತಡೆವೊಡ್ಡಲಾಗಿದೆ. ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡಲಾಗಿ ಕೂತು ರಸ್ತೆ ಸಂಚಾರಕ್ಕೆ ತಡೆವೊಡ್ಡಿದ್ದರು. ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ರಾಮರೆಡ್ಡಿ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net