ಹಳ್ಳಿಗಟ್ಟಿನಲ್ಲಿ ಪುತ್ತರಿ ಸಂಭ್ರಮ

29 gkp. 01
ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸಂಭ್ರಮದ ಪುತ್ತರಿ ನಮ್ಮೆ ಆಚರಿಸಲಾಯಿತು.
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಮಂಗಳವಾರ ಸಾಮೂಹಿಕ ದೇವರ ಕದಿರು ತೆಗೆಯಲಾಯಿತು.

ಮೂಕಳೇರ ರಾಜ ಉತ್ತಪ್ಪ ಎಂಬುವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರನ್ನು ತೆಗೆಯುವ ಮೂಲಕ ಪುತ್ತರಿಯನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಊರಿನವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪೊನ್ನಂಪೇಟೆ, ಜೋಡುಬೀಟಿಯ ಸಾರ್ವಜನಿಕರು ಆಗಮಿಸಿ ಕದಿರನ್ನು ಮನೆಗೆ ಕೊಂಡೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net