

ಗೋಣಿಕೊಪ್ಪ: ಸಮೀಪದ ನಿಟ್ಟೂರು ಕಾರ್ಮಾಡು ಕಾಲಭೈರವ ದೇವಸ್ಥಾನದ ಭತ್ತದ ಗದ್ದೆಯಲ್ಲಿ ಮಂಗಳವಾರ ಬೆಳಗ್ಗೆ ರೋಹಿಣಿ ನಕ್ಷತ್ರದಲ್ಲಿ ಧಾನ್ಯ ಲಕ್ಷ್ಮೀಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಗ್ರಾಮಸ್ಥರು ಮನೆಗಳಿಗೆ ತೆರಳಿ ತಮ್ಮ ತಮ್ಮ ಗದ್ದೆಗಳಲ್ಲಿ ಕದಿರನ್ನು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಿದರು. ಕಾಲಭೈರವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೇಚಂಡ ಸೋಮಯ್ಯ, ಉಪಾಧ್ಯಕ್ಷ ಚೀರಂಡ ಸುಬ್ರಮಣಿ, ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಅರ್ಚಕರಾದ ಸುರೇಶ್ ಭಟ್, ನಿರ್ದೇಶಕರಾದ ತಾಣಚ್ಚೀರ ಲೋಕೇಶ್, ಪಡಿಞರಂಡ ಪ್ರಭು ಕುಮಾರ್, ಪೊನ್ನಿಮಾಡ ಸಂತೋಷ್, ಹೊಟ್ಟೇಂಗಡ ಅಜಿತ್, ಲೋಹಿತ್, ಕಾಡೇಮಾಡ ಪ್ರವೀಣ್, ತಿಮ್ಮಯ್ಯ, ಕಳ್ಳೇಂಗಡ ಉತ್ತಯ್ಯ, ಕಾಶಿ ವಿವೇಕಾನಂದ, ಪೊನ್ನಿಮಾಡ ಕುಶಾಲಪ್ಪ, ಮಲ್ಲೇಂಗಡ ಶಶಿಮಣಿ, ಕೊಲತಂಡ ಮುತ್ತಪ್ಪ, ಮತ್ತಿತರರು ಹಾಜರಿದ್ದರು.