ಇಲ್ಲಿದೆ ಕುಡಿಯುವ ನೀರು, ವಿದ್ಯುತ್ ಸಮಸ್ಯೆ

15 gkp 04
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨ನೇ ವಾರ್ಡ್ ನಿವಾಸಿಗಳು ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದಾರೆ.

ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಕ್ಷೇತ್ರ ಸಂಚಾರದಲ್ಲಿ ವಾರ್ಡಿನ ಸಮಸ್ಯೆಗಳು ಅನಾವರಣಗೊಂಡಿತು. ವಾರ್ಡಿನಲ್ಲಿರುವ ಪ್ರಮುಖ ಸಮಸ್ಯೆ ಬಗ್ಗೆ ವಾರ್ಡ್ ಪ್ರತಿನಿಧಿಸುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಮಂಜುಳ, ಕೆ.ರಾಜೇಶ್, ವೈ. ಎಂ. ಸವಿತಾ ಹಂಚಿಕೊಂಡರು. ಪ್ರತೀ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂಬ ಭರವಸೆಯನ್ನು ಸ್ಥಳೀಯರಿಗೆ ನೀಡಿದರು.

ಹೆಚ್ಚು ಕಾರ್ಮಿಕ ವರ್ಗದವರು ನೆಲೆಸಿರುವ ವಾರ್ಡ್ ಇದಾಗಿದೆ. ಬಸ್ ನಿಲ್ದಾಣ, ಮಾರುಕಟ್ಟೆ ವ್ಯಾಪ್ತಿ ಇದ್ದರೂ ಕೂಡ ಸ್ವಚ್ಚತೆಗೆ ಆದ್ಯತೆ ನೀಡಿದ್ದಾರೆ. ಕೀರೆ ಹೊಳೆಗೆ ಕಸ ಎಸೆಯುವುದು ಇಲ್ಲಿ ಸಾಮಾನ್ಯ. ಇಲ್ಲಿ ಜೀವನ ಸಾಗಿಸುವವರಿಗೆ ರೋಗ ಹರಡುವ ಆತಂಕ ಇದೆ. ವರ್ಷ ದಿಂದ ವರ್ಷಕ್ಕೆ ಸ್ವಚ್ಚತೆ ಹೆಚ್ಚಾಗುತ್ತಿದೆ. ವಾರ್ಡ್ ಭಾಗದ ರಸ್ತೆ ಸಮಸ್ಯೆ ಬಹುತೇಕ ಈಡೇರಿದ್ದು. ಕಾಂಕ್ರಿಟ್, ಇಂಟರ್‌ಲಾಕ್ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಕಿರಿದಾದ ರಸ್ತೆ ಬದಿ ಸ್ಥಳೀಯರೇ ವಾಹನ ನಿಲುಗಡೆ ಮಾಡುವುದರಿಂದ ತೊಂದರೆ ಹೆಚ್ಚು. ಇದರೊಂದಿಗೆ ಸ್ವಚ್ಚತಾ ವಾಹನ ತೆರಳಲು ಕಷ್ಟವಾಗುತ್ತದೆ.

ಪ್ರತಿನಿತ್ಯ ಸ್ವಚ್ಚತಾ ವಾಹನ ಬರಬೇಕೆಂದು ಸ್ಥಳೀಯರು ಹೇಳಿದರು. ತಗ್ಗು ಪ್ರದೇಶ ಇರುವ ಕಾರಣ, ಎತ್ತರದ ಪ್ರದೇಶದಲ್ಲಿರುವ ನಿವಾಸಿಗಳು ಶೌಚಗೃಹದ ತ್ಯಾಜ್ಯವನ್ನು ಚರಂಡಿಗೆ ಬಿಡುತ್ತಿದ್ದಾರೆ. ಇದು ಉಸಿರಾಡಲು ಕಷ್ಟವಾಗುತ್ತಿದೆ ಎಂದು ಸ್ಥಳಿಯರು ಹೇಳಿದರು. ಪೌರ ಕಾರ್ಮಿಕ ರು ವಾಸಿಸುವ ಪ್ರದೇಶದಲ್ಲಿ ಬಸ್ ನಿಲ್ದಾಣ, ವಿವಿಧ ಮಳಿಗೆಗಳ ಶೌಚ ತ್ಯಾಜ್ಯದ ಟ್ಯಾಂಕ್ ಇರುವುದರಿಂದ ದುರ್ವಾಸನೆಗೆ ಕ್ರಮಕೈಗೊಳ್ಳ ಬೇಕೆಂದು ಸ್ಥಳೀಯರು ಒತ್ತಾಯಿಸಿದರು.

ಹಕ್ಕುಪತ್ರ ಇಲ್ಲದವರು ಹೆಚ್ಚು
ಸುಮಾರು ೧೫೦ ಕ್ಕೂ ಹೆಚ್ಚು ನಿವಾಸಿಗಳಿಗೆ ಇಲ್ಲಿ ಹಕ್ಕುಪತ್ರವೇ ಇಲ್ಲ. ಪಂಚಾಯಿತಿ ಹಕ್ಕುಪತ್ರ ನೀಡಲು ಕೈಗೊಂಡ ಕಾರ್ಯಕ್ರಮ ಪೂರ್ಣ ಗೊಂಡಿಲ್ಲ. ಗುಡಿಸಲು ಕಟ್ಟಿಕೊಂಡಿರುವ ಬಹುತೇಕರಿಗೆ ಪ್ರತ್ಯೇಕ ನಿವೇಶನ ಕಲ್ಪಿಸಿಕೊಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಬೇಕಿದೆ. ಕೀರೆ ಹೊಳೆ ದಂಡೆಯಲ್ಲಿರುವ ಪ್ರದೇಶವಾಗಿರುವುದರಿಂದ ಭವಿಷ್ಯದಲ್ಲಿ ಜನವಾಸಕ್ಕೆ ಅವಕಾಶದಿಂದ ವಂಚಿತರಾಗುವ ಆತಂಕದೆ.

ಇಂಟರ್‌ಲಾಕ್ ರಸ್ತೆ
ಮನೆಯ ಜಗುಲಿಯವರೆಗೂ ರಸ್ತೆ ಇರುವುದರಿಂದ ಒಳ ರಸ್ತೆಗಳಿಗೆ ಇಂಟರ್‌ಲಾಕ್ ಮೂಲಕ ರ್ನಿುಸಲಾಗುತ್ತಿದೆ. ಸಾಕಷ್ಟು ಬಾರಿ ಕುಡಿಯುವ ನೀರಿನ ಮಾರ್ಗದ ಪೈಪ್‌ಲೈನ್‌ಗೆ ರಸ್ತೆ ಅಗೆಯುವುದರಿಂದ ರಸ್ತೆ ಕಿತ್ತು ಬರುತ್ತದೆ. ಇದನ್ನು ತಪ್ಪಿಸಲು ಇಂಟರ್‌ಲಾಕ್ ವ್ಯವಸ್ಥೆ ಪ್ರಯೋಜನಕ್ಕೆ ಬರುತ್ತದೆ. ಸಿಮೆಂಟ್ ತುಂಡು ಹೊರ ತೆಗೆದು ಮತ್ತೆ ರಸ್ತೆಯನ್ನಾಗಿ ಜೋಡಿಸಿಕೊಳ್ಳಬಹುದಾಗಿದೆ. ಎಲ್ಲ ರಸ್ತೆಗೂ ಈ ರೀತಿಯ ತಂತ್ರಜ್ಞಾನ ಅನುಷ್ಠಾನಕ್ಕೆ ಸದಸ್ಯರು ಮುಂದಾಗಿದ್ದಾರೆ.

ವಾಸವಿಲ್ಲದ ಗುಡಿಸಲು ತೆರವು
ಅಕ್ರಮವಾಗಿ ಒಂದಷ್ಟು ಗುಡಿಸಲು ಕಟ್ಟಿಕೊಂಡಿದ್ದವರು ಜಾಗ ಖಾಲಿ ಮಾಡಿದ್ದಾರೆ. ಸಾರ್ವಜನಿಕರಿಗೆ ಸ್ನಾನದ ಮನೆ ನಿರ್ಮಿಸಿಕೊಂಡಿದ್ದನ್ನು ತೆರವು ಮಾಡಲಾಗಿದೆ. ಇದರಂತೆ ವಾಸವಿಲ್ಲದ ಗುಡಿಸಲು ತೆರವುಗೊಳಿಸಿ, ಸ್ವಚ್ಚತೆಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಕಂದಾಯ ಇಲಾಖೆ ಇತ್ತ ಗಮನ ಹರಿಸಬೇಕಿದೆ. ಸಮುದಾಯ ಆರೋಗ್ಯ ಕೇಂದ್ರದ ಂಬದಿಯ ರಸ್ತೆ, ಮುಕುಂದ ಬಡಾವಣೆ ರಸ್ತೆ, ಮಾರುಕಟ್ಟೆ, ಹಳೆಯ ಅಂಚೆಕಚೇರಿ ಸುೀಪದ ರಸ್ತೆ ಅಭಿವೃದ್ದಿಯಾಗಬೇಕಿದೆ. ಅನುದಾನ ಕೂಡ ಕಾಯ್ದಿರಿಸಲಾಗಿದೆ.

ಕಾರ್ಮಿಕ ವರ್ಗ ಹೆಚ್ಚಿರುವ ಪ್ರದೇಶ
೧ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಇಲ್ಲಿ ಕಾರ್ಮಿಕ ವರ್ಗದವರು ಹೆಚ್ಚಿದ್ದಾರೆ. ತರಕಾರಿ ಮಾರುಕಟ್ಟೆ, ಹಂದಿ ಮಾಂಸ, ಕೋಳಿ, ಕುರಿ ಮಾಂಸದ ಮಾರುಕಟ್ಟೆಗಳಿವೆ. ಸ್ವಚ್ಚತೆ ನಿಭಾಯಿಸುವುದು ಇಲ್ಲಿ ಸವಾಲು. ಜನನಿಬಿಡ ಪ್ರದೇಶದಲ್ಲಿ ಸ್ವಚ್ಚತೆ ಕಾಣುತ್ತಿದೆ. ಒಂದೊಂದು ಕಡೆಗಳಲ್ಲಿ ಮಾತ್ರ ಕೀರೆ ಹೊಳೆ ದಂಡೆಗೆ ಸ್ಥಳೀಯರು, ಅತ್ತ ಪ್ರಯಾಣ ಬೆಳೆಸುವವರು ಕಸ ಬಿಸಾಡಿ ಹೋಗುತ್ತಿದ್ದಾರೆ. ಸ್ವಚ್ಚತಾ ವಾಹನ ೨ ದಿನಕೊಮ್ಮೆ ಬರುತ್ತಿರುವುದು ಕಸ ನಿಭಾಯಿಸಲು ಕಷ್ಟ ಎಂದು ಹೊಳೆ ದಂಡೆಗೆ ಕಸ ಹಾಕುವವರು ಇಲ್ಲಿದ್ದಾರೆ.

ಮಾರುಕಟ್ಟೆ ಕಸ ನಿಭಾಯಿಸಲು ಪ್ರತ್ಯೇಕ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಸ ನಿರ್ವಹಣೆ ಜವಾಬ್ದಾರಿ ನಿಭಾಯಿಸಬೇಕಿದೆ. ಚರಂಡಿಗೆ ಮನೆಯ ಪ್ಲಾಸ್ಟಿಕ್, ಪ್ಯಾಡ್ ಬಿಸಾಡುತ್ತಿರುವುದು ಸಮಸ್ಯೆಯಾಗಿದೆ. ಬಸ್ ನಿಲ್ದಾಣ ಕೂಡ ಇದೇ ವ್ಯಾಪ್ತಿಗೆ ಬರುವುದರಿಂದ ಕಸದ ಸಮಸ್ಯೆ ನಿತ್ಯ ಕಾಡುತ್ತಿದೆ.

**
ಬಹುತೇಕ ಸಮಸ್ಯೆ ಪರಿಹಾರ ಕಂಡಿದೆ. ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದ್ಯುತ್ ವೋಲ್ಟೇಜ್ ಸಮಸ್ಯೆಗೆ ಸೆಸ್ಕ್ ಸ್ಪಂದಿಸಬೇಕು. ಟ್ರಾನ್ಸ್‌ಫಾರ್ಮರ್ ಮೇಲ್ದರ್ಜೆಗೇರಿಸಬೇಕು. ರಾತ್ರಿ ಬೆಳಕು ನೀಡಬೇಕಾದ ಸೆಸ್ಕ್ ವಿದ್ಯುತ್ ಇಲ್ಲದೆ ಕತ್ತಲಿಗೆ ತಳ್ಳುತ್ತಿದೆ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಎಂ. ಮಂಜುಳ, ವಾರ್ಡ್ ಸದಸ್ಯೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ.

**
ನಾಲ್ಕು ರಸ್ತೆ ಅಭಿವೃದ್ದಿಯಾಗಬೇಕಿದೆ. ಅನುದಾನ ಬಿಡುಗಡೆ ಹಂತದಲ್ಲಿದೆ. ಚರಂಡಿಯಲ್ಲಿ ಕಸ ಹಾಕುತ್ತಿರುವುದು, ರಸ್ತೆ ಬದಿಯಲ್ಲಿ ಕಸ ಬಿಸಾಡುತ್ತಿರುವುದು ಸ್ಥಳೀಯರಿಗೆ ಕಷ್ಟವಾಗುತ್ತಿದೆ. ರೋಗ ರುಜಿನ ಹರಡದಂತೆ ಕಸವನ್ನು ಸ್ವಚ್ಚತಾ ವಾಹನಕ್ಕೆ ನೀಡಿ ಸಹಕರಿಸಬೇಕಿದೆ. ವೈ. ಎಂ. ಸವಿತಾ, ಉಪಾಧ್ಯಕ್ಷೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ.

**
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ೨ ಕೊಳವೆ ಬಾವಿ ತೋಡಲಾಗಿದೆ. ನೀರು ಕೂಡ ಇದೆ. ಆದರೆ, ಟ್ಯಾಂಕ್ ಕಡಿಮೆ ಸಾಮರ್ಥ್ಯ ಹೊಂದಿರುವುದು ಸಮಸ್ಯೆಯಾಗಿದೆ. ಹೆಚ್ಚು ನೀರು ಶೇಖರಣೆ ಮಾಡುವಷ್ಟು ದೊಡ್ಡ ಟ್ಯಾಂಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ನಿತ್ಯ ಜನರ ಸಮಸ್ಯೆ ಆಲಿಸುತ್ತಿದ್ದೇವೆ. ಕೆ. ರಾಜೇಶ್, ವಾರ್ಡ್ ಸದಸ್ಯ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net