

ಗೋಣಿಕೊಪ್ಪ: ಸಮೀಪದ ಗೊಟ್ಟಡ ಕಳತ್ಮಾಡುವಿನಲ್ಲಿ ಶ್ರೀ ಅಯ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಸೇವಾ ಸಂಘದಿಂದ 25ನೇ ವರ್ಷದ ಶ್ರೀ ಗೌರಿ-ಗಣೇಶ ಉತ್ಸವ ಅಂಗವಾಗಿ ಸ್ಥಳೀಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು, ಮಹಿಳೆಯರು ಹಾಗೂ ಹಿರಿಯರಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, ಸ್ಲೋ ಬೈಕ್ ರೇಸ್, ಫುಟ್ಬಾಲ್ ಪಂದ್ಯಾಟ ನಡೆಯಿತು. ಸ್ಥಳೀಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು. ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.
ಫುಟ್ಬಾಲ್ ಪಂದ್ಯಾಟವನ್ನು ಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಉದ್ಘಾಟಿಸಿದರು. ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಹೊಳಕೆರೆ ಪ್ರಭು ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರಾದ ಬಲ್ಯಂಡ ವೇಣು ಮಂದಣ್ಣ, ಜಮ್ಮಡ ಜಯ ಜೋಯಪ್ಪ, ಕತ್ರಿಕೊಲ್ಲಿ ನಂಜುಂಡ ಕುಮಾರ್, ವಿ.ಎಂ.ಗಿರಿಯಪ್ಪ, ಹೊಸೂರು ಗ್ರಾಪಂ ಪಿಡಿಒ ಎಂ.ಡಿ.ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಕೊಲ್ಲೀರ ಧನುಪೂಣಚ್ಚ, ವಿ.ವಿ.ಪ್ರಕಾಶ್, ಸುಶೀಲಾ, ಸಮಿತಿಯ ಉಪಾಧ್ಯಕ್ಷ ಬಿ.ಎ.ಚೇತನ್, ಕಾರ್ಯದರ್ಶಿ ಬಿ.ಸಿ.ಗಿರೀಶ್, ಸದಸ್ಯರಾದ ಬಿ.ಎಲ್. ಕಾರ್ತಿಕ್, ನಂಜುಂಡ ಕುಮಾರ್, ಪ್ರಕಾಶ್,ವಿ.ಕೆ.ಪ್ರಭಾಕರ್, ಎಂ.ಟಿ.ಯತೀಶ್, ಎಚ್.ಎಲ್. ಸುರೇಂದ್ರ, ಬಿ.ಕೆ.ಶ್ರೀಧರ್, ವಿ.ಪಿ.ಚಿದಾನಂದ ಇದ್ದರು.
ಆರೋಗ್ಯ ತಪಾಸಣೆ: ಇದೇ ವೇಳೆ ಸೇವಾ ಭಾರತಿ ಕೊಡಗು ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ವೈದ್ಯರಾದ ಡಾ.ಅನನ್ಯ ರಾಜಶೇಖರ್, ಡಾ.ವಿಜಯಲಕ್ಷ್ಮೀ, ಡಾ.ಹರಿಪ್ರಿಯಾ, ಡಾ.ಸಂತೋಷ್ ಭೈರವ, ಸೇವಾ ಭಾರತಿಯ ಪ್ರಮುಖರಾದ ಟಿ.ಸಿ.ಚಂದ್ರನ್, ಕಾಯೇರ ಕಿರಣ್, ಪದ್ಮನಾಭ, ಮುರುಗೇಶ್ ಉಪಸ್ಥಿತರಿದ್ದರು.