ದೇಶ ಸೇವೆಗೆ ಅಗ್ನಿವೀರರು ಅತ್ಯಗತ್ಯ

29 gkp 01
Published on

ಗೋಣಿಕೊಪ್ಪ: ದೇಶ ಸೇವೆಗೆ ಯುವಶಕ್ತಿ ಬಳಸಲು ಅಗ್ನಿಪಥ್ ಯೋಜನೆ ಸಹಕಾರಿ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ನಾಯಡ ಚಿಣ್ಣಪ್ಪ ಹೇಳಿದರು.

ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕ ಸಹಯೋಗದಲ್ಲಿ ವಿಜಯವಾಣಿ, ದಿಗ್ವಿಜಯ ವಾಹಿನಿ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ ಅಗ್ನಿಪಥ್ ಸಾಧಕ-ಬಾಧಕ ಸಂವಾದದಲ್ಲಿ ವಿಷಯ ಮಂಡಿಸಿ ಮಾತನಾಡಿದರು.

ಇದುವರೆಗೂ ಸೇನೆಗೆ ಕಾಯಂ ನೇಮಕಾತಿ ನಡೆಯುತ್ತಿತ್ತು. ೧೭ ವರ್ಷ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಲಭ್ಯವಾಗುತ್ತಿತ್ತು. ಇದೀಗ ೪ ವರ್ಷಕ್ಕೆ ಸೀಮಿತವಾಗಿ ಅಗ್ನಿವೀರರ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿದೆ. ಯುವಶಕ್ತಿಯನ್ನು ದೇಶ ಸೇವೆಗೆ ಬಳಸಿಕೊಳ್ಳಲು ಇದು ಸಹಕಾರಿ ಆಗಲಿದೆ ಎಂದರು.

ಬೇರೆ- ಬೇರೆ ದೇಶದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದೆ. ಇಸ್ರೇಲ್‌ನಲ್ಲಿ ಪ್ರತಿಯೊಬ್ಬರು ಕನಿಷ್ಠ ೨ ವರ್ಷ ದೇಶ ಸೇವೆ ಮಾಡಿರಬೇಕು. ಅಗ್ನಿಪಥ್ ಉತ್ತಮ ಯೋಜನೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಹದಿನೇಳುವರೆ ವಯಸ್ಸಿನಿಂದ ಇಪ್ಪತ್ಮೂರು ವರ್ಷದವರೆಗಿನವರನ್ನು ಅಗ್ನೀರರಾಗಿ ನೇಮಕ ಮಾಡಲಾಗುತ್ತಿದೆ. ಪ್ರಥಮ ವರ್ಷ ೪೬ ಸಾರ ಅಗ್ನಿವೀರರ ನೇಮಕಕ್ಕೆ ಸರ್ಕಾರ ಮುಂದಾಗಿದ್ದು, ಮುಂದೆ ೧.೫೦ ಲಕ್ಷ ಜನರ ನೇಮಕಾತಿ ಆಗಲಿದೆ ಎಂದರು.

ಅಗ್ನಿವೀರರಿಗೆ ೬ ತಿಂಗಳು ಸೇನಾ ತರಬೇತಿ ನೀಡಲಾಗುತ್ತದೆ. ಮೊದಲ ವರ್ಷ ೨೧ ಸಾರ, ಕೊನೆ ವರ್ಷ ೩೩ ಸಾವಿರ ರೂ. ವೇತನ ಸಿಗಲಿದೆ. ನಿವೃತ್ತರಾಗುವ ವೇಳೆ ೧೧ ಲಕ್ಷ ರೂ. ಸಿಗಲಿದೆ. ವಿಮೆ, ಸೇವಾ ನಿಧಿ ಸವಲತ್ತು ಇರುತ್ತದೆ. ಕೇಂದ್ರ ಗೃಹ ಸಚಿವಾಲಯ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಯಲ್ಲಿ ಶೇ.೧೦ ರಷ್ಟು ಹುದ್ದೆ ಅಗ್ನಿವೀರರಿಗೆ ಮೀಸಲಾಗಿ ಇಡಲಾಗಿದೆ ಎಂದು ಹೇಳಿದರು.

ಅಗ್ನಿವೀರರಿಗೆ ೪ ವರ್ಷ ಉತ್ತಮ ತರಬೇತಿ ಸಿಗುತ್ತದೆ. ಶಿಶ್ತು, ಬದ್ಧತೆ ಮತ್ತು ದೇಶ ಪ್ರೇಮ ಕಲಿಸುತ್ತದೆ. ಪ್ರತಿಭೆಗೆ ಪೂರಕ ತರಬೇತಿ ಸಿಗಲಿದೆ. ೪ ವರ್ಷ ಕಳೆದ ಬಳಿಕ ಸ್ವ ಉದ್ಯೋಗ ಮಾಡಬಹುದು. ಶಿಕ್ಷಣ ಮುಂದುವರಿಸಬಹುದು. ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ಸೇರಬಹುದೆಂದು ಕರ್ನಲ್ ಚಿಣ್ಣಪ್ಪ ಹೇಳಿದರು.

ದೇಶದ ಪ್ರಗತಿಗೆ ಪ್ರತಿಯೊಬ್ಬರ ಕೊಡುಗೆ ಅತ್ಯಗತ್ಯ ಅಗ್ನೀರರಾಗಿ ೪ ವರ್ಷ ಸೇವೆ ಸಲ್ಲಿಸಿದ ಬಳಿಕ ಕೈಗೆ ೧೧ ಲಕ್ಷ ರೂ. ಬರುತ್ತದೆ. ಆವಾಗ ನಾವು ಯಾರಿಗೂ ಹೆದರಬೇಕಾಗಿಲ್ಲ. ಧೈರ್ಯದಿಂದ ಜೀವನ ಸಾಗಿಸಬಹುದೆಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾವೇರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕುಟ್ಟಂಡ ಜಿ. ಉತ್ತಪ್ಪ ಹೇಳಿದರು.

ಅಗ್ನಿವೀರರು ದೇಶಕ್ಕೆ ಸದೃಢವಾದ ಶಕ್ತಿ ಆಗಲಿದ್ದಾರೆ. ಅಗ್ನಿಪಥ್ ಸಂಪೂರ್ಣ ಮಾತಿ ವೆಬ್‌ಸೈಟ್‌ನಲ್ಲಿ ಲಭ್ಯದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರಿಲು ಮುಂದಾಗಬೇಕೆಂದು ಕುಟ್ಟಂಡ ಉತ್ತಪ್ಪ ಕರೆ ನೀಡಿದರು.

೨೦೨೩ನೇ ಇಸವಿ ಜೂನ್ ತಿಂಗಳಿನಲ್ಲಿ ಮೊದಲ ತಂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆಂದು ಕಾರ್ಯಕ್ರಮ ಅಧ್ಯಕ್ಷತೆ ವಸಿ ಮಾತನಾಡಿದ ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಹೇಳಿದರು.

ಹಲವು ದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ದೇಶದಲ್ಲಿ ೧೦ ಕೋಟಿ ಉದ್ಯೋಗಾವಕಾಶ ನೀಡುವ ಯೋಜನೆಯಡಿ ಅಗ್ನೀರರು ಸೇರಿದ್ದಾರೆಂದು ಐನಂಡ ಕೆ. ಮಂದಣ್ಣ ಹೇಳಿದರು.

ಸೇನಾ ನೇಮಕಾತಿ ಪ್ರತಿಕ್ರಿಯೆ ಅಗ್ನಿವೀರರ ನೇಮಕಾತಿ ಸಂದರ್ಭದಲ್ಲಿಯೂ ಅನುಸರಿಸಲಾಗುತ್ತಿದೆ. ದೈಕ, ಲಿಖಿತ, ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಗೆ ಸಿದ್ಧ ಮಾಡಲು ಗೋಣಿಕೊಪ್ಪ ಲಯನ್ಸ್ ಪ್ರಾಥುಕ ಶಾಲೆಯಲ್ಲಿ ಶನಿವಾರ, ಭಾನುವಾರ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಕೊಡಗು ಎಜುಕೇಷನ್ ಅಂಡ್ ಸೋಯಲ್ ರ್ಸೀಸ್ ಟ್ರಸ್ಟ್ ಕಾರ್ಯದರ್ಶಿ ಮಾಚರ್ಂಡ ಗಣೇಶ್ ಪೊನ್ನಪ್ಪ ಹೇಳಿದರು.

ಭಾರತೀಯ ಸೇನೆಗೆ ಹಣ ಕೊಟ್ಟು ಸೇರಲು ಅವಕಾಶಲ್ಲ. ಕೆಲವರು ೫ ಲಕ್ಷ ರೂ. ನೀಡಿದ್ದಲ್ಲಿ ಸೇನೆಗೆ ಸೇರಿಸುವುದಾಗಿ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಉಚಿತವಾಗಿ ಕೋಚಿಂಗ್ ನೀಡುತ್ತೇವೆಂದು ಮೂಲ ದಾಖಲೆ ಪಡೆದುಕೊಂಡು ಆಟ ಆಡಿಸುವವರಿದ್ದಾರೆ. ಈ ಬಗ್ಗೆ ಜಾಗೃತರಾಗಿರಬೇಕೆಂದು ಗಣೇಶ್ ಪೊನ್ನಪ್ಪ ಎಚ್ಚರಿಸಿದರು.

೧೦ನೇ ತರಗತಿವರೆಗೆ ಮಕ್ಕಳು ಪಾಲಕರ ನಿಯಂತ್ರಣದಲ್ಲಿರುತ್ತಾರೆ. ಕಾಲೇಜಿಗೆ ಬರುತ್ತಿದಂತೆ ದಾರಿ ತಪ್ಪುತ್ತಾರೆ. ಶೇ.೭೫ ರಷ್ಟು ಮಕ್ಕಳು ಮೊಬೈಲ್‌ನಿಂದ ಹಾಳಾಗುತ್ತಿದ್ದಾರೆ. ಶೇ.೪೦ ದ್ಯಾರ್ಥಿಗಳಿಗೆ ಮಾದಕ ವಸ್ತು ಪರಿಚಯ ಇರುತ್ತದೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಬೇಸರ ವ್ಯಕ್ತ ಪಡಿಸಿದರು.

ಸಂವಾದದಲ್ಲಿ ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಜಂಟಿ ಕಾರ್ಯದರ್ಶಿ ಬಿ.ಎನ್. ಬೆಳ್ಯಪ್ಪ, ಗೋಣಿಕೊಪ್ಪ ಆಟೋ ಮಾಲೀಕ- ಚಾಲಕರ ಸಂಘ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಕಾವೇರಿ ಕಾಲೇಜು ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿನೆಂಟ್ ಚಟ್ಟಂಡ ಬಿ. ಲೇಪಾಕ್ಷಿ ಪಾಲ್ಗೊಂಡಿದ್ದರು. ಕಾವೇರಿ ಕಾಲೇಜು ವಿದ್ಯಾರ್ಥಿಗಳಾದ ಟಿ.ಪಿ. ಪ್ರತಿಭಾ, ಎನ್.ಬಿ. ವೈಷ್ಣ ನಿರೂಪಿಸಿದರು. ಲೆಫ್ಟಿನೆಂಟ್ ಎಂ.ಆರ್. ಅಕ್ರಂ ಸ್ವಾಗತಿಸಿದರು. ಲೆಫ್ಟಿನೆಂಟ್ ಚಟ್ಟಂಡ ಬಿ. ಲೇಪಾಕ್ಷಿ ವಂದಿಸಿದರು.

ಯೋಜನೆ ಫಲಕ್ಕೆ ಪ್ರತಿಭಟನೆ
ಭಾರತೀಯರು ಪ್ರತಿಯೊಂದು ಯೋಜನೆಯನ್ನು ಪ್ರಾರಂಭದಲ್ಲಿ ರೋಧಿಸುವುದನ್ನು ರೂಢಿಸಿಕೊಂಡಿದ್ದಾರೆ. ರ್ಟ್ರೋಯ ಶಿಕ್ಷಣ ನೀತಿ, ಜಿಎಸ್‌ಟಿ, ಆಧಾರ್ ಸೇರಿದ್ದಂತೆ ಎಲ್ಲಾ ಮಹತ್ವದ ಯೋಜನೆಗೂ ರೋಧ ವ್ಯಕ್ತವಾಗಿತ್ತು. ಆದರೆ, ಈ ಯೋಜನೆಗಳು ತದನಂತರ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದೆ ಎಂದು ಕರ್ನಲ್ ನಾಯಡ ಬಿ. ಚಿಣ್ಣಪ್ಪ ಹೇಳಿದರು.

ಸರ್ಕಾರದ ಯೋಜನೆ ಫಲಗೊಳಿಸುವ ಉದ್ದೇಶದಿಂದ ಅಗ್ನಿಪಥ್‌ಗೆ ರೋಧ ವ್ಯಕ್ತವಾಗಿದೆ. ಉತ್ತರಪ್ರದೇಶ, ಬಿಹಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೇರೆ- ಬೇರೆ ರಾಜ್ಯಕ್ಕೆ ರ್ಕಾುಕರಾಗಿ ಹೋಗುತ್ತಾರೆ. ಕೋಡ್ ಬಳಿಕ ಊರಿಗೆ ಮರಳಿದ್ದರು. ಇವರು ರೈಲು, ಬಸ್ಸು ಸುಟ್ಟು ಅಗ್ನಿಪಥ್‌ಗೆ ರೋಧ ವ್ಯಕ್ತ ಪಡಿಸಿದ್ದಾರೆ. ಇದು ದುರುದ್ದೇಶದಿಂದ ಕೂಡಿದ ಪ್ರತಿಭಟನೆ ಎಂದರು.

ಪ್ರಾಯೋಗಿಕ ನೇಮಕಾತಿ ಮಾಡಬೇಕಿತ್ತು
ಅಗ್ನಿಪಥ್ ಯೋಜನೆಯನ್ನು ಮೊದಲು ಭಾರತೀಯ ಸೇನೆಯಲ್ಲಿ ಪ್ರಾಯೋಗಿಕವಾಗಿ ಮಾಡಬೇಕಿತ್ತು. ಕನಿಷ್ಠ ೧೦೦ ಅಗ್ನಿವೀರರನ್ನು ಸೇನೆಯ ಧ ಭಾಗಕ್ಕೆ ನೇಮಕ ಮಾಡಿ, ಅದರ ಪರಿಣಾಮದ ಬಗ್ಗೆ ಗಮನ ಹರಿಸಬೇಕಾಗಿತ್ತೆಂದು ಕರ್ನಲ್ ನಾಯಡ ಚಿಣ್ಣಪ್ಪ ಹೇಳಿದರು.

ಅಗ್ನಿಪಥ್ ಬಗ್ಗೆ ಸರ್ಕಾರ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ನೇರವಾಗಿ ಯೋಜನೆ ಘೋಸುವ ಮುನ್ನ ರಾಜಕೀಯ ನೇತಾರರೊಂದಿಗೆ ಸಮಲೋಚನೆ ನಡೆಸಬೇಕಾಗಿತ್ತು. ಏಕಾಏಕೀ ಘೋಷಣೆ ಮಾಡಿದ್ದರಿಂದ ಒಂದಿಷ್ಟು ಗೊಂದಲ ಮೂಡುವಂತಾಗಿದೆ ಎಂದು ಷಾದ ವ್ಯಕ್ತ ಪಡಿಸಿದರು.

ಅಗ್ನಿವೀರರಾದ್ದಲ್ಲಿ ಜೀವನದಲ್ಲಿ ಶಿಸ್ತು ಬರುತ್ತದೆ. ಇದರೊಂದಿಗೆ ದೇಶ ಸೇವೆ ಮಾಡುವ ಅವಕಾಶ ಸಿಗಲಿದೆ. ಯುವ ಸಮೂಹದ ಇದರ ಪ್ರಯೋಜನಕ್ಕೆ ಮುಂದಾಗಬೇಕು. ಬಿ.ಎಸ್. ಚಂದ್ರಶೇಖರ್, ನಿರ್ದೇಶಕರು, ಪೊನ್ನಂಪೇಟೆ ಮಾಜಿ ಸೈನಿಕರ ಸಂಘ.

ಯೋಧರ ಬಗ್ಗೆ ಕೊಡಗಿನಲ್ಲಿ ಗೌರವ ಮತ್ತು ಹೆಮ್ಮೆ ಇದೆ. ವಿದ್ಯಾರ್ಥಿಗಳು ಅಗ್ನಿವೀರರಾಗಿ ದೇಶ ಸೇವೆಗೆ ಮುಂದಾಗಬೇಕು. ಆ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಕೊಣಿಯಂಡ ಬೋಜಮ್ಮ ಉತ್ತಪ್ಪ, ಸದಸ್ಯರು, ಗ್ರಾ.ಪಂ. ಗೋಣಿಕೊಪ್ಪ.

ಪಾಲಕರು ಖರ್ಚು-ವೆಚ್ಚ ಭರಿಸುವುದರಿಂದ ವಿದ್ಯಾರ್ಥಿಗಳಿಗೆ ಕಷ್ಟದ ಅರಿವು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಬದುಕಿನ ಕಷ್ಟ ಗೊತ್ತಾಗಲಿದೆ. ಅಗ್ನಿಪಥ್ ಒಳ್ಳೆಯ ಯೋಜನೆಯಾಗಿದ್ದು, ಅಗ್ನಿವೀರರಾಗುವತ್ತ ಗಮನ ಹರಿಸಬೇಕು. ಪೆಮ್ಮಂಡ ಪ್ರಸಾದ್, ಕಾರ್ಯದರ್ಶಿ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net