ಡಾಂಬರು ಮಿಕ್ಸಿಂಗ್ ಘಟಕ ಸ್ಥಳಾಂತರಕ್ಕೆ ಆಗ್ರಹ

15 gkp 01
Published on

ಕುಂದ, ಈಚೂರು ಗ್ರಾಮಸ್ಥರ ಪ್ರತಿಭಟನೆ

  • ಗೋಣಿಕೊಪ್ಪ : ಜನವಸತಿ ಪ್ರದೇಶದಲ್ಲಿರುವ ಡಾಂಬರು ಮಿಕ್ಸಿಂಗ್ ಹಾಗೂ ಕಾಂಕ್ರಿಟ್ ಮಿಕ್ಸಿಂಗ್ ಘಟಕದಿಂದ ಹೊರ ಬರುವ ದಟ್ಟ ಹೊಗೆ ಮತ್ತು ಯಂತ್ರಗಳ ಶಬ್ದದಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಘಟಕವನ್ನು ಊರಿನ ಆಚೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
    ಕುಂದ, ಈಚೂರು ಘಟಕದ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು, ಎರಡೂ ಘಟಕದ ಯಂತ್ರೋಪಕರಣಗಳು ರಾತ್ರಿಯ ವೇಳೆಯಲ್ಲೂ ಸದ್ದು ಮಾಡುತ್ತಿವೆ. ಇದು ಪ್ರತಿನಿತ್ಯ ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಘಟಕಕ್ಕೆ ಬೇಕಾದ ಡಾಂಬರು, ಜೆಲ್ಲಿ, ಮರಳು ಇತ್ಯಾದಿ ಸಾಮಗ್ರಿಗಳನ್ನು ಹೊತ್ತು ತರುವ ಭಾರಿ ಗಾತ್ರದ ವಾಹನಗಳಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಸ್ಥಳೀಯರ ವಾಹನ ಸಂಚಾರಕ್ಕೂ ತೊಡಕಾಗಿದೆ ಎಂದು ಪ್ರತಿಭಟನಾಕಾರರು ಘಟಕದ ಎದುರೇ ಘೋಷಣೆ ಕೂಗಿ ಪ್ರತಿಭಟಿಸಿದರು. ಕೊಡಗು ಜಿಲ್ಲಾಧಿಕಾರಿಗಳು ಈ ಘಟಕಗಳನ್ನು ಗ್ರಾಮದಿಂದ ಊರಿನ ಹೊರ ಪ್ರದೇಶಕ್ಕೆ ಸ್ಥಳಾಂತರಗೊಳಿಸಲು ತುರ್ತು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net