ಮಧೂರು ದೇಗುಲದಲ್ಲಿ ಗೊನೆ ಮುಹೂರ್ತ

New Project (33)
Published on

ಕಾಸರಗೋಡು: ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಸಂಭ್ರಮದಲ್ಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗೊನೆ ಮುಹೂರ್ತ ಶುಕ್ರವಾರ ನೆರವೇರಿತು.

ದೇವಸ್ಥಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನೆರವೇರಿಸಲಾಯಿತು. ದೇವಾಲಯದಲ್ಲಿ ನಡೆಯಲಿರುವ 5 ದಿವಸಗಳ ಉತ್ಸವದ ಅಂಗವಾಗಿ ಐದು ಬಾಳೆ ಗೊನೆ ಕಡಿದು ದೇವರ ಕೆರೆಯ ನೀರಲ್ಲಿ ಮುಳುಗಿಸಿ ದೇಗುಲದ ನಡೆಯಲ್ಲಿ ಇರಿಸಿ ಪ್ರಾರ್ಥಿಸಲಾಯಿತು.

ಮಾ.27ರಿಂದ ಏ.7ರವರೆಗೆ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶ, ಮೂಡಪ್ಪ ಸೇವೆ, ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿರುವುದು. ಮಾ.30ರಂದು ಪುನಃ ಪ್ರತಿಷ್ಠಾಪನೆ, ಏ.2ರಂದು ಬ್ರಹ್ಮಕಲಶೋತ್ಸವ, 5ರಂದು ಮೂಡಪ್ಪ ಸೇವೆ ನಡೆಯಲಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net