

ಕಲಬುರಗಿ : ಎಲ್ಲರ ಚಿತ್ತ ಚಿತ್ತಾಪುರದತ್ತ ಹರಿಯುವಂತೆ ಮಾಡಿರುವ ಆರ್ ಎಸ್ ಎಸ್ ಮತ್ತು ಬೀಮ ಅರ್ಮಿ ಸಂಘರ್ಷಕ್ಕೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಈಗ ಕುರುಬರು ಎಂಟ್ರಿ ಹೊಡೆದಿದ್ದಾರೆ.
ಗೊಂಡಕುರುಬರನ್ಬು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಶ್ರಯಿಸಿ ಚಿತ್ತಾಪುರದಲ್ಲಿ ನ.2 ರಂದು ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಕುರುಬರ ಸಂಘದವರು ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದಾರೆ. ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾಪವನ್ನು ಸಲ್ಲಿಸಿದ್ದು, ಅದಕ್ಕೆ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಡ ಹೇರಲು ವಿವಿಧ ಹಂತದ ಹೋರಾಟ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ನ.೨ ರಂದು ಚಿತ್ತಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಲಾಗುವುದು ಎಂದು ಗೊಂಡಕುರುಬರ ಸಂಘದ ಅಧ್ಯಕ್ಷ ಮಹಾಂತೇಶ ಕೌಲಗಿ ತಿಳಿಸಿದ್ದಾರೆ.