ಪ್ರಧಾನಿ ಮೋದಿಗೆ ಗೋಮಯ ಹಣತೆ

modi
Published on

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಗೋಮಯದಿಂದ ತಯಾರಿಸಿದ ಹಣತೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುವ ಜತೆಗೆ ವಿದೇಶಿ ವಸ್ತುಗಳಿಂದ ದೂರ ಇರಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಪ್ರಧಾನಿಯವರ ಆತ್ಮನಿರ್ಭರ ಕಲ್ಪನೆಗೆ ಪೂರಕವಾಗಿ ವಿದ್ಯಾಸಂಸ್ಥೆಯ ವಸುಧರ ಗೋಶಾಲೆಯ 45 ಗೋವುಗಳ ಸೆಗಣಿಯನ್ನು ಬಳಸಿಕೊಂಡು 10 ಸಾವಿರ ಹಣತೆಗಳನ್ನು ತಯಾರಿಸಲಾಗಿದೆ.

ಹಣತೆ ತಯಾರಿಯ ಕೊನೇ ದಿನವಾದ ಗುರುವಾರ ಎರಡು ಡಜನ್ ಹಣತೆಗಳನ್ನು ಅಂಚೆ ಮೂಲಕ ಪ್ರಧಾನಿಯವರ ದೆಹಲಿ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net