ಹಡಗಲಿ ಗೋಮಾಳ ಜಮೀನು ರಕ್ಷಿಸಿ

VJP 29-5
Published on

ವಿಜಯಪುರ: ಅತಿಕ್ರಮಣಗೊಳ್ಳುತ್ತಿರುವ ಗೋಮಾಳ ಜಮೀನು ತೆರವುಗೊಳಿಸಿ ಪಶುಪಾಲನೆಗೆ ಮೀಸಲಿಡಲು ಆಗ್ರಹಿಸಿ ಗೋಮಾಳ ಬಚಾವೋ ಹೊರಾಟ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಮೋಹನಕುಮಾರಿಗೆ ಮನವಿ ಸಲ್ಲಿಸಲಾಯಿತು.

ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ರಿ.ಸ.ನಂ 42/2ನ 60 ಎಕರೆ ಸರ್ಕಾರಿ ಹುಲ್ಲುಗಾವುಲು ಭೂಮಿ ಇದ್ದು, ಕೆಇಬಿ ಅವರು 400 ಕೆವಿಯ ವಿದ್ಯುತ್ ಸ್ಥಾವರ ನಿರ್ಮಿಸುವ ಹಂತದಲ್ಲಿದ್ದಾರೆ. ಇದರಿಂದ ಹಡಗಲಿ ಗ್ರಾಮದ ಕುರಿಗಾಯಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಹೀಗಾಗಿ ಕೂಡಲೇ ಆ ಜಮೀನು ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ರಾಜೇಶ್ವರಿ ಯರನಾಳ, ಹುಲಿಜಂತಿ ಮಾಳಿಂಗರಾಯರು, ಪರಮಾನಂದ ಮನುಗೂಳಿ ಅಜ್ಜನವರು, ಲಕ್ಷ್ಮಣ ಪೂಜಾರಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ದೇವಕಾಂತ ಬಿಜ್ಜರಗಿ, ಮಲ್ಲಪ್ಪ ಬಿದರಿ, ಮನು ಬಾವಿಕಟ್ಟಿ, ರಾಜು ಯರನಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net