ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

GLS 29-1 A
Published on

ಗೊಳಸಂಗಿ: ಆಧುನಿಕತೆಯ ಭರಾಟೆಯಲ್ಲಿ ಅವಸಾನದ ಅಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಸ್ಥಳೀಯ ಪ್ರಾಥಮಿಕ ಕೈಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕುಮಾರಗೌಡ ಪಾಟೀಲ ಹೇಳಿದರು. ಗ್ರಾಮದ ಬೀರಲಿಂಗೇಶ್ವರ ಜಾತ್ರೋತ್ಸವ ಸಮಾರೋಪ ನಿಮಿತ್ತ ಭಾನುವಾರ ಏರ್ಪಡಿಸಲಾಗಿದ್ದ ಎತ್ತಿನ ಬಂಡಿ ರೇಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾತ್ರಾ ಸಮಿತಿ ಮುಖಂಡ, ಶಿಕ್ಷಕ ಎಂ.ಆರ್. ಮಂಕಣಿ ಮಾತನಾಡಿದರು. ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ಬಸಪ್ಪ ಭುಜಂಗೋಳ ಎತ್ತಿನ ಬಂಡಿ ರೇಸ್‌ಗೆ ಚಾಲನೆ ನೀಡಿದರು. ಸುರೇಶ ಮಂಕಣಿ, ವಿ.ಎಂ. ದಳವಾಯಿ, ಸುದೇಶ ಪರಮಗೊಂಡ, ಮುದಕಪ್ಪ ಕಾರಜೋಳ, ಬೀರಪ್ಪ ಬೇನಾಳ, ಸುಭಾಸ ಜಾಧವ, ಈಶ್ವರ ನಲವಡೆ, ಈಶ್ವರ ಜಾಧವ ಮತ್ತಿತರರಿದ್ದರು.

ವಿಜೇತರಿಗೆ ಬಹುಮಾನ

ವಿಜಯಪುರ ಜಿಲ್ಲಾಧ್ಯಂತ ಒಟ್ಟು 17 ಎತ್ತಿನ ಬಂಡಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ವಿಜೇತರಾದ ಮುತ್ತಗಿಯ ಪರಸಪ್ಪ ಮನಗೂರ(ಪ್ರಥಮ), ಗೊಳಸಂಗಿಯ ಮಹಾದೇವ ಜಾಧವ(ದ್ವಿತೀಯ), ಬಬಲೇಶ್ವರದ ಗುರುಪಾದಪ್ಪ ಯತ್ನಾಳ(ತೃತೀಯ) ಇವರಿಗೆ ಕಮಿಟಿ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net