

ಚಿತ್ರದುರ್ಗ: ಗೊಲ್ಲ ಸಮುದಾಯ ಶ್ರಮದ ಸಂಕೇತವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಮಗ್ರ ಬದಲವಣಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ವಿಜ್ಞಾನ, ನಾಗರಿಕತೆ ಬಹಳಷ್ಟು ಮುಂದುವರಿದಿದ್ದು, ಹಳೆಯ ಮೌಢ್ಯಗಳ ಪಾಲನೆ ಬಿಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಂಕಷ್ಟ, ಬಡತನ, ಸಮಸ್ಯೆಗಳ ಮಧ್ಯೆಯೂ ಛಲವಿದ್ದರೆ ಉನ್ನತ ಸ್ಥಾನ ಗಳಿಸಬಹುದು. ಇದಕ್ಕೆ ಶಿಕ್ಷಣ ಹಾಗೂ ಕಷ್ಟಪಟ್ಟು ದುಡಿಯುವ ಮನಸ್ಸಿರಬೇಕು ಎಂದು ಸಲಹೆ ನೀಡಿದರು.