

ವಿಜಯವಾಣಿ ಸುದ್ದಿಜಾಲ ಬೆಳ್ವೆ
ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆ ಮೂಲಕ ಗುರುತಿಸಿಕೊಂಡಿರುವುದು ಶ್ಲಾಘನಾರ್ಹ. ಸಮಾಜಕ್ಕೆ ಪೂರಕ ಸೇವೆಗಳಿಗೆ ಆದ್ಯತೆ ನೀಡಿದಾಗ ಯಶಸ್ಸು ಲಭಿಸುತ್ತದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಹೇಳಿದರು.
ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್‌ಗೆ ಇತ್ತೀಚೆಗೆ ಭೇಟಿ ನೀಡಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳ್ವೆ ಸ್ವಚ್ಛತಾ ಘಟಕದ ಸಿಬಂದಿಯನ್ನು ಸನ್ಮಾನಿಸಲಾಯಿತು.
ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಅಧ್ಯಕ್ಷತೆ ವಹಿಸಿದರು. ಲಯನ್ಸ್ ಜಿಲ್ಲಾ ಉಪ ಗವರ್ನರ್ ಸ್ವಪ್ನಾ ಸುರೇಶ್, ಪ್ರಮುಖರಾದ ಶ್ರೀನಿವಾಸ ಪೈ, ಬನ್ನಾಡಿ ಸೋಮನಾಥ ಹೆಗ್ಡೆ, ಅನಂದ ಶೆಟ್ಟಿ, ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ವೈ.ಪಟ್ಟಾಭೀರಾಮ್ ಭಟ್ ಮರೂರು, ಮೊಹಮ್ಮದ್ ಹನೀಫ್, ಸುದರ್ಶನ ನಾಯಕ್, ಅಣ್ಣಯ್ಯ ಶೆಟ್ಟಿ ಕಮ್ಗೋಳಿ, ಜಯಪ್ರಕಾಶ್ ಶೆಟ್ಟಿ ಯಳಂತೂರು, ಬಿ.ಸತೀಶ ಕಿಣಿ ಬೆಳ್ವೆ, ಬಾಬು ಶೆಟ್ಟಿ ಜಗ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಶಶಿಕಲಾ ಅಲ್ಸೆ, ಭಾರ್ಗವಿ ಭಟ್ ಗೋಳಿಯಂಗಡಿ ಪ್ರಾರ್ಥಿಸಿದರು. ತೀರ್ಥಕಲಾ ನೀತಿ ಸಂಹಿತೆ ಬೋಧಿಸಿದರು. ಎಸ್ ಜಯರಾಮ ಶೆಟ್ಟಿ ಸುರ‌್ಗೋಳಿ ಸ್ವಾಗತಿಸಿದರು. ಅಣ್ಣಯ್ಯ ಶೆಟ್ಟಿ ಕಮ್ಗೋಳಿ ವರದಿ ವಾಚಿಸಿದರು. ವೈ.ಪಟ್ಟಾಭೀರಾಮ್ ಭಟ್ ಮರೂರು ವಂದಿಸಿದರು. ಕೀರ್ತಿಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿ.ವಿನೋದ ಕಿಣಿ ಬೆಳ್ವೆ, ಚಂದ್ರಿಕಾ ಸಹಕರಿಸಿದರು.