ಚಿನ್ನಬೆಳ್ಳಿ ವರ್ತಕರು ಎಚ್ಚರಿಕೆಯಿಂದ ವ್ಯವಹರಿಸಿ

20kkr2.(5-24
ಕಿಕ್ಕೇರಿ ಆರಕ್ಷಕ ಠಾಣೆಯಲ್ಲಿ ಸೋಮವಾರ ಚಿನ್ನಬೆಳ್ಳಿ ವರ್ತಕರೊಂದಿಗೆಇನ್‌ಸ್ಪೆಕ್ಟರ್ ರೇವತಿ ಸಭೆ ನಡೆಸಿದರು. ಪಿಎಸ್‌ಐ ಕೇಶವಪ್ರಸಾದ್, ಶಿವಲಿಂಗಪ್ಪ, ಸುನಿಲ್, ಕುಮಾರ್, ವಿನೋದ್, ಚಿನ್ನಬೆಳ್ಳಿ ವರ್ತಕರು ಇದ್ದರು.
Published on

ಕಿಕ್ಕೇರಿ: ವಲಸೆ ಬಂದ ಜನತೆ ಚಿನ್ನ ಖರೀದಿಸುವ ನೆಪದಲ್ಲಿ ಕಳವು ಮಾಡಿದ ಚಿನ್ನಾಭರಣವನ್ನು ಗಿರವಿ ಇಡಲು ಮುಂದಾಗುತ್ತಿದ್ದು ಜಾಗ್ರತೆ ವಹಿಸಬೇಕು ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.

ಇಲ್ಲಿನ ಆರಕ್ಷಕ ಠಾಣೆಯಲ್ಲಿ ಸೋಮವಾರ ಚಿನ್ನಬೆಳ್ಳಿ ವರ್ತಕರಿಗೆ ಸಭೆ ನಡೆಸಿ ಮಾತನಾಡಿ, ಅಪರಿಚಿತ ವ್ಯಕ್ತಿಗಳು ಚಿನ್ನಾಭರಣ ತಂದಾಗ ಎಚ್ಚರಿಕೆ ವಹಿಸಿ. ಸೂಕ್ತ ದಾಖಲೆಗಳಿಲ್ಲದೆ ಯಾವುದೇ ವಸ್ತುಗಳನ್ನು ಅಡಮಾನವಾಗಿ ಇಟ್ಟುಕೊಳ್ಳಬಾರದು ಎಂದು ತಾಕೀತು ಮಾಡಿದರು.

ಕಡಿಮೆ ಬೆಲೆಗೆ ವಸ್ತುಗಳು ಸಿಕ್ಕಿವೆ ಎಂದು ಖರೀದಿ ಮಾಡಲು ಮುಂದಾದರೆ ಕಾನೂನು ರೀತಿ ತಪ್ಪಾಗಲಿದೆ. ಕಡ್ಡಾಯವಾಗಿ ನಿಮ್ಮ ಅಂಗಡಿಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ. ಕೇವಲ ಅಂಗಡಿಯೊಳಗೆ ಮಾತ್ರ ಅಳವಡಿಸಿಕೊಳ್ಳದೆ ರಸ್ತೆಯಲ್ಲಿ ಓಡಾಡುವವರ ಮಾಹಿತಿ ತಿಳಿಯುವಂತೆ ಅಳವಡಿಸಿ. ಯಾವುದೇ ರೀತಿ ಚಿನ್ನಾಭರಣಗಳ ಲಕ್ಕಿ ಡಿಪ್ ರೀತಿ ವ್ಯವಹಾರ ಮಾಡುವ ಮುನ್ನ ಮಾಹಿತಿ ನೀಡಿ. ಅಧಿಕೃತ ಅನುಮತಿ, ಪರವಾನಗಿ ಇಲ್ಲದೆ ಕಾನೂನುಬಾಹಿರ ವ್ಯವಹಾರ ಮಾಡಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಪಿಎಸ್‌ಐ ಕೇಶವಪ್ರಸಾದ್, ಶಿವಲಿಂಗಪ್ಪ, ಸುನಿಲ್, ಕುಮಾರ್, ವಿನೋದ್, ಚಿನ್ನಬೆಳ್ಳಿ ವರ್ತಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net