ಸೌಡದಲ್ಲಿ ಸ್ವರ್ಣ ಪಾದುಕಾ ಯಾತ್ರೆ

jnd
Published on

ಜನ್ನಾಡಿ: ಶ್ರೀ ಕಾಶಿ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತವಾನೋತ್ಸವ ಪ್ರಯುಕ್ತ ಶ್ರೀ ಗುರು ಸುಧೀಂದ್ರ ತೀರ್ಥರ ಸ್ವರ್ಣ ಪಾದುಕಾ ಯಾತ್ರೆ ಬಸ್ರೂರು ಶ್ರೀ ಶಾಖಾ ಕಾಶೀ ಮಠದಿಂದ ಸೌಡ ಶ್ರೀರಾಮಚಂದ್ರ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು. ಬಳಿಕ ಸಿದ್ದಾಪುರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನಕ್ಕೆ ಸ್ವರ್ಣಪಾದಕ ಯಾತ್ರೆಯನ್ನು ಬೀಳ್ಕೊಡಲಾಯಿತು.

ದೇವಸ್ಥಾನದ ಕಾರ್ಯದರ್ಶಿ ಸೌಡ ಪದ್ಮನಾಭ ಭಂಡಾರ್ಕರ್, ಕೋಶಾಧಿಕಾರಿ ದಾಮೋದರ್ ಪೈ ಸೌಡ, ದಾಮೋದರ್ ನಾಯಕ್ ಶಿರಿಯಾರ, ಮೋಹನ್‌ದಾಸ್ ಪ್ರಭು ಬೆಳ್ವೆ, ನಾರಾಯಣ ಶೆಣೈ ಗಾವಳಿ, ವಾಧವ್ ಎನ್.ಪೈ ಹಾಲಾಡಿ, ಶರತ್ ಕಾಮತ್, ರಾಯೇಶ್ ರಾಮಚಂದ್ರ ಭಟ್ಟ, ಸೌಡ ಶ್ರೀ ರಾಮರಕ್ಷಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ದೇವಳ ಆಡಳಿತ ಮೊಕ್ತೇಸರ ಯು.ಕಮಲಾಕ್ಷ ಪೈ ಬಿದ್ಕಲಕಟ್ಟೆ ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಮಚಂದ್ರ ವಿಠಲ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net