ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳ ಗಮನಹರಿಸಲಿ

HNP
ಹೊಳೆನರಸೀಪುರದ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಉದ್ಘಾಟಿಸಿದರು. ಎಚ್.ಡಿ.ರೇವಣ್ಣ, ಕೆ.ಶ್ರೀಧರ್, ಎಸ್.ಗೋಕುಲ್, ಜೈಪ್ರಕಾಶ್, ತ್ರಿಲೋಚನಾ, ಮಾದಯ್ಯ ಇದ್ದರು.
Published on

ಹೊಳೆನರಸೀಪುರ: ಒಳ್ಳೆಯ ಯೋಚನೆಗಳು ಸಾಧನೆಗೆ ದಾರಿದೀಪವಾಗಿದ್ದು, ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.

ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ ಹಾಗೂ 2023-24ನೇ ಸಾಲಿನ ಕಾಲೇಜಿನ ವಿವಿಧ ಸಂಘಗಳ ಚಟವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು. ತಾನು ಈ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷೆ ಆದ ನಂತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ವ್ಯಾಮೂಹಕ್ಕೆ ಬಿದ್ದಿದ್ದು, ಮೊಬೈಲ್ ಅನ್ನು ವ್ಯಾಸಂಗಕ್ಕೆ ಅಗತ್ಯವಿರುವಾಗ ಮಾತ್ರ ಬಳಸಬೇಕು ಎಂದು ಹೇಳಿದರು.

ಕಾಲೇಜು ಆರಂಭಗೊಂಡು 17 ವರ್ಷ ಕಳೆದಿದ್ದು, ಇಪ್ಪತ್ತು ವರ್ಷದ ಆಚರಣೆಗೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಹ್ವಾನಿಸಲಾಗುವುದು ಎಮದು ಮಾಹಿತಿ ನೀಡಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಶ್ರೀಧರ್, ಎಸ್.ಗೋಕುಲ್, ಜೈಪ್ರಕಾಶ್ ,ಪುರಸಭೆ ಉಪಾಧ್ಯಕ್ಷೆ ತ್ರಿಲೋಚನಾ, ಕಾಲೇಜು ಪ್ರಾಂಶುಪಾಲ ಮಾದಯ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net