ಒಗ್ಗಟ್ಟಿನಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ಸುಧೀರ್ ಕುಮಾರ್ ಶೆಟ್ಟಿ ಅಭಿಮತ

New Project (9)
Published on

ಸುಬ್ರಹ್ಮಣ್ಯ: ಗ್ರಾಮೀಣ ಭಾಗದ ಯುವ ಸಂಟನೆ ಐದು ದಶಕಗಳಿಂದ ಸಮಾಜಮುಖಿ ಸೇವೆ ನೆರವೇರಿಸುತ್ತಿರುವುದು ಶ್ಲಾನೀಯ. ಯುವಜನಾಂಗದ ಒಗ್ಗಟ್ಟಿನಿಂದ ಸ್ವಾಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಹೇಳಿದರು.

ಬಿಳಿನೆಲೆ ಕೈಕಂಬ ಯುವಕ ಮಂಡಲ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು. ನೂತನ ಕಟ್ಟಡ ಯುವಸೌಧವನ್ನು ಪ್ರಗತಿಪರ ಕೃಷಿಕೆ ಲೀಲಾವತಿ ದೇವರಾಜ್ ವೆಂಕಟಾಪುರ ಉದ್ಘಾಟಿಸಿದರು. ಬಿಳಿನೆಲೆ ಗ್ರಾಪಂ ಅಧ್ಯಕ್ಷೆ ಶಾರದಾ ದಿನೇಶ್ ಸಮಾರಂಭಕ್ಕೆ ಚಾಲನೆ ನೀಡಿದರು. ಯುವಕ ಮಂಡಲ ಅಧ್ಯಕ್ಷ ಶಿವಪ್ರಸಾದ್ ನಡುತೋಟ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕಡಬ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಬಿಳಿನೆಲೆ ಸೊಸೈಟಿ ಅಧ್ಯಕ್ಷ ಮಾಡ್ಯಪ್ಪ ಗೌಡ ಎರ್ಮಾಯಿಲ್, ಗ್ರಾಪಂ ಸದಸ್ಯರಾದ ಮುರಳಿಧರ ಎರ್ಮಾಯಿಲ್, ಭವ್ಯಾ ಕುಕ್ಕಾಜೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ನಡುತೋಟ, ಯುವಕ ಮಂಡಲ ಪೂರ್ವಾಧ್ಯಕ್ಷ ಪದ್ಮನಾಭ ಕಳಿಗೆ ಉಪಸ್ಥಿತರಿದ್ದರು. ಯುವಕ ಮಂಡಲ ಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಪಿಲಿಕಜೆ ಸ್ವಾಗತಿಸಿದರು. ಜಯಪ್ರಕಾಶ್ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಚೇರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net