ಸಿಎಸ್‌ಐ ಕಾಮರ್ಸ್ ಕಾಲೇಜಿನ ಸುವರ್ಣ ಮಹೋತ್ಸವ

Published on

ಧಾರವಾಡ: ನಗರದ ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭವನ್ನು ಅ. 25 ಮತ್ತು 26ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 25ರಂದು ಬೆಳಗ್ಗೆ 10ಕ್ಕೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಬಿಷಪ್ ಮಾರ್ಟಿನ್ ಬೋರ್ಗಾಯಿ ಗೌರವ ಉಪಸ್ಥಿತರಿರುವರು. ಅತಿಥಿಗಳಾಗಿ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ, ಮೇಯರ್ ಜ್ಯೋತಿ ಪಾಟೀಲ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸುವರು. ಸಿಎಸ್‌ಐ ಕೆಎನ್‌ಡಿ ಧರ್ಮದರ್ಶಿಗಳಾದ ಎಸ್.ಡಿ. ಬೇಲಿ, ಪ್ರೊ. ಜೆ.ಎಸ್. ಕುರಿ, ವಿಜಯಕುಮಾರ ದಂಡಿನ, ಕಾರ್ಯದರ್ಶಿ ವಿಲ್ಸನ್ ಮೈಲಿ ಗೌರವ ಉಪಸ್ಥಿತರಿರುವರು.

ಅ. 26ರಂದು ಬೆಳಗ್ಗೆ 10 ಗಂಟೆಗೆ ಜರುಗುವ ಸಿಎಸ್‌ಐ ಹಿಂದಿನ ವಿದ್ಯಾರ್ಥಿಗಳ ಸಮ್ಮೇಳನವನ್ನು ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಉದ್ಘಾಟಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ ಗೌರವ ಉಪಸ್ಥಿತರಿರುವರು. ಮಧ್ಯಾಹ್ನ 12ಕ್ಕೆ `ಹಂಚುವೆವು ನೆನಪಿನ ಬುತ್ತಿಯ' ಗೋಷ್ಠಿ, ಮಧ್ಯಾಹ್ನ 3.30ಕ್ಕೆ ಹಿಂದುಸ್ಥಾನಿ ಸಂಗೀತಗಾರ ಪಂ. ಕೈವಲ್ಯಕುಮಾರ ಗುರವ ಅವರಿಂದ `ಅನುರಾಗ ಸಂಗಮ' ಸಂಗೀತ ಕಾರ್ಯಕ್ರಮವಿದೆ. ಸಂಜೆ 5 ಗಂಟೆಗೆ ಸಮಾರೋಪ ಜರುಗಲಿದ್ದು, ನಿವೃತ್ತ ಪ್ರಾಚಾರ್ಯ ಪ್ರೊ. ಎನ್.ಬಿ. ಘೋಡಕೆ ಅಧ್ಯಕ್ಷತೆ ವಹಿಸುವರು. ಪ್ರಾಚಾರ್ಯೆ ಡಾ. ಕಮಲಾ ಢವಳೆ ಸಮಾರೋಪ ನುಡಿಗಳನ್ನಾಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net