ಜ.6ರಂದು ಸುವರ್ಣ ಮಹೋತ್ಸವ

Drama-games
Published on

ಮೈಸೂರು: ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜ.6 ಮತ್ತು 7ರಂದು ಸಂಘದ ಆವರಣದಲ್ಲಿನ ಯೋಗ ಸಂಸ್ಕೃತಿ ಕಲಾ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಡಾ.ನಾರಾಯಣ ಹೆಗಡೆ ತಿಳಿಸಿದರು.

ಜ.6ರಂದು ಸಂಜೆ 4 ಗಂಟೆಗೆ ಆಹಾರ ಮೇಳ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟನೆಗೊಳ್ಳಲಿವೆ. ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ನಡೆಯಲಿವೆ. ಜ.7ರಂದು ಬೆಳಗ್ಗೆ 10ಕ್ಕೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಜಗನ್ನಾಥ ಶೆಣೈ ಉದ್ಘಾಟಿಸುವರು. ಡಾ.ಗುರುಪಾದ ಹೆಗಡೆ ಇನ್ನಿತರರು ಅತಿಥಿಗಳಾಗಿರುವರು. ಡಾ.ನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ತೇಜಸ್ವಿ ನಾಯಕ್, ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net