ಪ್ರೀತಕೃಷ್ಣಾಗೆ ಗೋಲ್ಡನ್ ಕೊರಿಯೋಗ್ರಾಫರ್ ಪ್ರಶಸ್ತಿ

dances
Published on

ಮಡಿಕೇರಿ: ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಶನ್ ಸಂಸ್ಥೆಯ ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿ ಪ್ರೀತಕೃಷ್ಣ ಅವರಿಗೆ ಗೋಲ್ಡನ್ ಕೊರಿಯೋಗ್ರಾಫರ್ ಪ್ರಶಸ್ತಿ ಲಭಿಸಿದೆ.


ವಾವ್ ಸಿನಿಮಾಸ್ ಚಾನಲ್ ವತಿಯಿಂದ ಬೆಂಗಳೂರಿನ ಸ್ಫೂರ್ತಿಧಾಮ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಾವ್ ಸಿನಿಮಾದ ನಿರ್ದೇಶಕ, ನಿರ್ಮಾಪಕ ಅವಿನಾಶ್, ಬಿಗ್ ಬಾಸ್ ಸೀಸನ್-೪ ವಿನ್ನರ್ ಪ್ರಥಮ್, ನೃತ್ಯ ಸಂಯೋಜಕರಾದ ಜಗ್ಗಿ, ಶಶಿ, ಭೂಷಣ್, ವರುಣ್ ರವಿ ಮೋಹನ್ ಮತ್ತಿತರರು ಪ್ರೀತಕೃಷ್ಣಾಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net