ನಾಟ್ಯಶಾಸ್ತ್ರದಲ್ಲಿ ತನುಶ್ರೀ ಪಿತ್ರೋಡಿ 8ನೇ ವಿಶ್ವದಾಖಲೆ

udp-4-tanushri
Published on

ಉಡುಪಿ: ನಾಟ್ಯಶಾಸ್ತ್ರದ 108 ಕರಣಗಳನ್ನು 3.29 ನಿಮಿಷಗಳಲ್ಲಿ ಮಾಡುವ ಮೂಲಕ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು, 8ನೇ ವಿಶ್ವದಾಖಲೆಗೆ ಭಾಜನರಾಗಿದ್ದಾರೆ.

ಬನ್ನಂಜೆ ಶ್ರೀ ನಾರಾಯಗುರು ಆಡಿಟೋರಿಯಂನಲ್ಲಿ ನಾಟ್ಯಶಾಸ್ತ್ರದ 4ನೇ ಅಧ್ಯಾಯದ ತಾಂಡವ ಲಕ್ಷಣಂ ನೃತ್ಯದ 108 ಭಂಗಿಗಳನ್ನು ನಿಗದಿತ 4 ನಿಮಿಷದೊಳಗೆ ಪೂರ್ಣಗೊಳಿಸಿ, ಎಲ್ಲರನ್ನೂ ಚಕಿತಗೊಳಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಕ್ಷಿಣ ಭಾರತ ಪ್ರತಿನಿಧಿ ಗೌರವ್ ಮಿತ್ತಲ್ ಪ್ರಮಾಣ ಪತ್ರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್, ಕಾರ್ಯಧ್ಯಕ್ಷ ಸೈಯದ್ ಅಪ್ಜಲ್, ಬಡಗಬೆಟ್ಟು ಸೊಸೈಟಿ ಆಡಳಿತ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಬಿಲ್ಲವ ಸೇವಾಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಕಾರ್ಯದರ್ಶಿ ಆನಂದ ಪೂಜಾರಿ, ನೃತ್ಯಗುರು ರಾಮಕೃಷ್ಣ ಕೊಡಂಚ, ಗಂಗಾಧರ ಕರ್ಕೆರಾ, ಶ್ರೀಕಾಂತ ಶೆಣೈ, ನಟಿ ಮಾನಸಿ ಕೊಡವೂರು, ತನುಶ್ರೀ ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರಾದ ವಿದ್ವಾನ್ ಬಾಲಸುಬ್ರಹ್ಮಣ್ಯಂ, ವಿದ್ವಾನ್ ನಾರಾಯಣ ಭಟ್, ಕಮಲಾಕ್ಷ ಆಚಾರ್ಯ, ಲಕ್ಷ್ಮೀ ಕೊಡವೂರು, ಸುಧೀರ್ ರಾವ್, ಬಾಲಚಂದ್ರ ರಾವ್, ಸಂಗೀತ ಬಾಲಚಂದ್ರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net