ಮಂಗಳೂರು ವಿಮಾನ ನಿಲ್ದಾಣದಲ್ಲಿ 16.79 ಲ.ರೂ. ಮೌಲ್ಯದ ಚಿನ್ನ ವಶ

Published on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 16,79,860 ರೂ. ಮೌಲ್ಯದ 338 ಗ್ರಾಂ 24 ಕ್ಯಾರಟ್ ಚಿನ್ನವನ್ನು ಕಸ್ಟಂಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಶಾರ್ಜಾದಿಂದ ಇಂಡಿಗೋ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡು ಮೂಲದ ವ್ಯಕ್ತಿಯಿಂದ ಈ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸ್ಟಿರಿಯೋ ಕೇಬಲ್‌ಗಳ ಆಡಿಯೋ ಜಾಕ್‌ನೊಳಗೆ, ಬಿಸ್ಕಿಟ್‌ ಹಿಟ್ಟು ಮಾಡುವ ಯಂತ್ರ, ಕ್ಯಾಂಡಲ್‌ ಸ್ಟಾಂಡ್‌ ಹಾಗೂ ಊದುಕಡ್ಡಿಯ ಸ್ಟಾಂಡ್‌ನ ಒಳಗೆ ಚಿನ್ನದ ಕಡ್ಡಿಗಳನ್ನು ಅಡಗಿಸಿ ಇರಿಸಿ ತರಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net