ಬಂಗಾರ ಕಳ್ಳನ ಬಂಧನ

gold thief arrest koppal police 80 gram gold
ಕೊಪ್ಪಳದಲ್ಲಿ ಚಿನ್ನ ಕದ್ದ ಆರೋಪಿಯೊಂದಿಗೆ ನಗರಠಾಣೆ ಪೊಲೀಸರು.
Published on

ಕೊಪ್ಪಳ: ನಗರ ಸೇರಿ ವಿವಿಧೆಡೆ ಬಂಗಾರ ಆಭರಣಗಳನ್ನು ಕಳ್ಳತ ಮಾಡುತ್ತಿದ್ದ ಗಂಗಾವತಿ ನಿವಾಸಿ ಪ್ರತಾಪ್ ಮುಚಿಗೇರನನ್ನು ನಗರಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆರೋಪಿಯಿಂದ 4 ಪ್ರಕರಣಗಳಿಗೆ ಸಂಬಂಧಿಸಿದಂತೆ 80 ಗ್ರಾಂ ಚಿನ್ನ ಹಾಗೂ 10,500ರೂ. ನಗದು ಒಳಗೊಂಡು 4.58ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ 10 ದಿನದ ಹಿಂದೆ ಕೊಪ್ಪಳದ ಸಿದ್ದೇಶ್ವರ ನಗರದಲ್ಲಿ ಮನೆ ಕಳ್ಳತನವಾಗಿತ್ತು. ಪ್ರಕರಣ ಪತ್ತೆಗೆ ವಿಶೇಷ ತಂಡ ರಚಿಸಿದ್ದು, 10 ದಿನದೊಳಗೆ ಆರೋಪಿ ಪತ್ತೆ ಮಾಡಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮನೆಯಲ್ಲಿದ್ದಾಗ ದಾಳಿ ಮಾಡಿದ ಪೊಲೀಸರು ವಿಚಾರಣೆ ನಡೆಸಿದಾಗ ಕದ್ದಿರುವ ವಿಷಯ ಬೆಳಕಿಗೆ ಬಂದಿದೆ.

ಕೊಪ್ಪಳ ನಗರಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನ ಹಾಗೂ ಮುನಿರಾಬಾದ್ ಠಾಣೆಯಲ್ಲಿ 1.50 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನ ಕದ್ದ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿವೆ.

ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ಯಶೋದಾ ವಂಟಗೋಡಿ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net