

ಮಂಗಳೂರು: ಮನೆ ಕೆಲಸ ಮಾಡುತ್ತಿದ್ದ ದಂಪತಿ 98 ಗ್ರಾಂ ಚಿನ್ನ ಕಳವು ಮಾಡಿದ್ದು, ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಸುಮತಿ ಮತ್ತು ಪ್ರಮೋದ್ ಆರೋಪಿಗಳು. ವಿಟ್ಲ ಮೂಡ್ನೂರು ಗ್ರಾಮದ ದಂಬೆತ್ತಾರು ಚಂದ್ರ ನಾಯಕ್ ಅವರ ಮನೆಯಿಂದ 1.48 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ ಲೈಟ್-1, ಚಿನ್ನದ ಲಕ್ಷ್ಮಿ ಚೈನ್-01, ಚಿನ್ನದ ಪದಕ ಸಹಿತ ಚೈನು -1, ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್-01, ಚಿನ್ನದ ಉಂಗುರಗಳು -03 (ಒಟ್ಟು 98 ಗ್ರಾಂ) ಚಿನ್ನಾಭರಣ ಕಳವು ಮಾಡಿದ್ದರು.