ಗಮನ ಬೇರೆಡೆ ಸೆಳೆದು 6 ಲಕ್ಷ ರೂ ಚಿನ್ನಾಭರಣ ವಂಚಿಸಿದ ಮೂವರ ಬಂಧನ

mng--11 Jan Gold
Published on

ಮಂಗಳೂರು: ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆಗೆ ಸೆಳೆದು 6 ಲಕ್ಷ ರೂ. ಮೌಲ್ಯದ 97.11 ಗ್ರಾಂ. ತೂಕದ ಚಿನ್ನಾಭರಣ ವಂಚಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.


ಮಂಜನಾಡಿಯ ಮಹಮ್ಮದ್ ಸಿನಾನ್ (25), ನಾಟೆಕಲ್‌ನವರಾದ ಹೈದರ್ ಆಲಿ (20), ಮೊಹಮ್ಮದ್ ತನ್ವೀರ್ (34) ಬಂಧಿತರು.
ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 97.11 ಗ್ರಾಂ ತೂಕದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 90 ಸಾವಿರ ರೂ. ಮೌಲ್ಯದ ಕಪ್ಪು ಬಣ್ಣದ ಸ್ಕೂಟರ್ ಹಾಗೂ ಸುಮಾರು 25 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ವಶಪಡಿಸಿಕೊಂಡು ಒಟ್ಟು 7.15 ಲಕ್ಷ ರೂ. ಆಗಿದೆ.
ಆರೋಪಿ ಮೊಹಮ್ಮದ್ ತನ್ವೀರ್ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಹೈದರ್ ಆಲಿ ವಿರುದ್ಧ ಕೊಣಾಜೆ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿದೆ.


ಬಂದರು ಠಾಣೆ ಇನ್‌ಸ್ಪೆಕ್ಟರ್ ಅಜ್ಮತ್ ಆಲಿ, ಪಿಎಸ್‌ಐಗಳಾದ ಪ್ರದೀಪ್ ಟಿ.ಆರ್., ಶಿವಪ್ಪ ಗೌಡ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net