

ಮಂಗಳೂರು: ಹಾಡುಹಗಲಿನಲ್ಲೇ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಲಶೇಖರದ ಕೆಎಂಎಫ್ ಡೈರಿ ಸಮೀಪ ಇರುವ ನಂದಿನಿ ನಗರದಲ್ಲಿ ನಡೆದಿದೆ.
ಅರುಣ್ ಎಚ್.ಎಸ್ ಅವರು ಜ.11ರಂದು ಬೆಳಗ್ಗೆ 10.30ಕ್ಕೆ ಪತ್ನಿಯನ್ನು ಫರಂಗಿಪೇಟೆಗೆ ಬಿಟ್ಟು ಅಪರಾಹ್ನ 3 ಗಂಟೆಗೆ ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ ಮನೆಯ ಬೆಡ್‌ರೂಮ್‌ನ ಸೆಲ್ಫ್‌ನಲ್ಲಿದ್ದ ಕಪಾಟಿನ ಕೀಯನ್ನು ಬಳಸಿ ನೆಕ್ಲೇಸ್, ಕಿವಿಯೋಲೆ, ಮಗುವಿನ ಸರ, ಬ್ರಾಸ್‌ಲೆಟ್, ಕೈಬಳೆ, ರಿಂಗ್‌ಗಳು ಸೇರಿದಂತೆ ಅಂದಾಜು 3.50 ಲ.ರೂ. ಮೌಲ್ಯದ ಸುಮಾರು 87.05 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.