

ಮಂಗಳೂರು: ಕಾವೂರು ಗಾಂಧಿನಗರದಲ್ಲಿರುವ ಬಿ.ಕೆ.ಜ್ಯುವೆಲ್ಲರ್ಸ್‌ಗೆ ಶನಿವಾರ ಬಂದ ಅಪರಿಚಿತ ವ್ಯಕ್ತಿ ಮೋಸದಿಂದ 38 ಗ್ರಾಂ ಚಿನ್ನವನ್ನು ಹಿಡಿದುಕೊಂಡು ಪರಾರಿಯಾಗಿದ್ದಾನೆ.
ನವರತ್ನ ಕೇಳುವ ನೆಪದಲ್ಲಿ ಬಂದ ಅಪರಿಚಿತ ಆಭರಣಗಳನ್ನು ನೋಡುತ್ತಿದ್ದ ಸಂದರ್ಭ 38 ಗ್ರಾಂ ಚಿನ್ನವನ್ನು ಮೋಸದಿಂದ ಪಡೆದು ಪರಾರಿಯಾಗಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.