ಬಂಗಾರಪೇಟೆ: ಪಟ್ಟಣದ ವಿಜಯನಗರದಲ್ಲಿ ವಾರದ ಹಿಂದೆ ಮನೆಗೆ ನುಗ್ಗಿ 1 ಕೆಜಿ 350 ಗ್ರಾಂ ಚಿನ್ನ ಕಳವು ಪ್ರಕರಣ ಮಾಸುವ ಮುನ್ನವೇ ಗುರುವಾರ ಗೀತಾಮಂದಿರ ಸಮೀಪದ ಚಿನ್ನದಂಗಡಿಯೊಂದಕ್ಕೆ ಬಂದ 6 ಮಂದಿ ಬುರ್ಕಾ ಧರಿಸಿದ ಮಹಿಳೆಯರ ತಂಡ ವ್ಯಾಪಾರದ ಸೋಗಿನಲ್ಲಿ ಮಾಲೀಕನನ್ನು ಯಾಮಾರಿಸಿ 650ಗ್ರಾಂ ಚಿನ್ನ ಎಗರಿಸಿ ಪರಾರಿಯಾಗಿದ್ದಾರೆ.
ಮಹಿಳೆಯರು ಹೋದ ನಂತರ ಚಿನ್ನ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಳಿಗೆಯಲ್ಲಿ ಸಿಸಿ ಕ್ಯಾಮರಾ ಇತ್ತಾದರೂ ಅದು ದುರಸ್ತಿ ಹಂತದಲ್ಲಿದೆ. ಅಂಗಡಿ ಮಾಲೀಕ ಶ್ರೀನಿವಾಸ್ ಗುಪ್ತ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಕೆಜಿಎ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿದ್ದು, ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ.