16 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ

gold
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 16,21,400 ರೂ.ಮೌಲ್ಯದ 335 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಪತ್ತೆ ಮಾಡಿದ್ದಾರೆ.

ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ಕಾಸರಗೋಡು ಮುಳಿಯಾರು ನಿವಾಸಿ ಮೊಹಮ್ಮದ್ ನವಾಸ್ ಸ್ಕೇಟಿಂಗ್ ಬೋರ್ಡ್‌ಗೆ ಚಿನ್ನದ ಚಕ್ರ ಮತ್ತು ಬೋಲ್ಟ್ ಜೋಡಿಸಿ ಅಕ್ರಮವಾಗಿ ಸಾಗಾಟ ಮಾಡಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ.

ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹಮ್ಮದ್ ಮತ್ತು ಜಂಟಿ ಆಯುಕ್ತ ಜೋನ್ಸ್ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತ ವಾಸುದೇವ ನಾಯ್ಕ ಡಿ.ನೇತೃತ್ವದಲ್ಲಿ ಕಸ್ಟಮ್ಸ್ ಸೂಪರಿಂಟೆಂಡೆಂಟ್‌ಗಳಾದ ಮನೋಕಾತ್ಯಾಯಿನಿ ಎಂ, ನಾಗೇಶ್ ಕುಮಾರ್ ಬಿ.ಎಂ, ನವೀನ್ ಕುಮಾರ್, ಸುಭೇಂದು ರಂಜನ್ ಬೆಹ್ರಾ, ವಿರಾಗ್ ಶುಕ್ಲಾ, ಅಜಿತ್ ಕುಮಾರ್ ವಿ.ಎಸ್, ಪಿ.ಸಿ.ಪದ್ದಿ, ಸತೀಶ್ ಕುಮಾರ್ ಮತ್ತು ಇನ್‌ಸ್ಪೆಕ್ಟರ್ ಪ್ರಫುಲ್ ಮಿತ್ತಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net