

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟ ಮಾಡುತ್ತಿದ್ದ 14.69 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 310 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಶಾರ್ಜಾದಿಂದ ಸೋಮವಾರ ಮಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಕಾಸರಗೋಡು ಪ್ರಯಾಣಿಕನ ಪ್ಯಾಂಟ್‌ನ ಒಳಗಡೆ ಚಿನ್ನವನ್ನು ಬಚ್ಚಿಡಲಾಗಿತ್ತು. ಚಿನ್ನವನ್ನು ಪೌಡರ್ ಮಾದರಿಯಲ್ಲಿ ಚಾಕಲೇಟ್ ಬಣ್ಣದ ಪ್ಯಾಂಟಿಗೆ ಒಳಗಡೆಯಿಂದ ಅಳವಡಿಸಲಾಗಿತ್ತು. ಆರೋಪಿಯನ್ನು ಪಡೆದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.