

ಉಡುಪಿ: ನಗರದ ಲಾಲಾಲಜಪತ್ ರಾಯ್ ಮಾರ್ಗದ 4ನೇ ಅಡ್ಡರಸ್ತೆಯಲ್ಲಿರುವ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಕಳ್ಳರು ಪಿರ್ಯಾದುದಾರರ ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್ ಬೆಡ್ ರೂಮಿನ ಬಾಗಿಲುಗಳ ಬೀಗ ಮುರಿದು, ಮನೆಯ ಬೆಡ್ ರೂಮ್ಗಳಲ್ಲಿದ್ದ ಅಲ್ಮೇರಾ ಬೀಗಳನ್ನು ತೆರೆದು ಅದರಲ್ಲಿದ್ದ ಅಂದಾಜು 1,882 ಗ್ರಾಂ ತೂಕದ ಸುಮಾರು ರೂ. 66,36,300 ಮೌಲ್ಯದ ಚಿನ್ನಾಭರಣಗ ಹಾಗೂ 7,450 ಗ್ರಾಂ ತೂಕದ ರೂ. 6,70,500 ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.