ವಿಮಾನ ನಿಲ್ದಾಣದಲ್ಲಿ 11.78 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ

mng-17 Aug Gold
Published on

ಮಂಗಳೂರು: ಇಲ್ಲಿನ ಅಂ.ರಾ. ವಿಮಾನ ನಿಲ್ದಾಣದಲ್ಲಿ 11,78,240 ರೂ. ಮೌಲ್ಯದ 223 ಗ್ರಾಂ ಅಕ್ರಮ ಸಾಗಾಟದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.


ದುಬಾಯಿಂದ ಸ್ಪೈಸ್ ಜೆಟ್‌ನಲ್ಲಿ ಆಗಮಿಸಿದ್ದ ಭಟ್ಕಳದ ವ್ಯಕ್ತಿ ಚಿನ್ನವನ್ನು ಪೌಡರ್ ರೂಪದಲ್ಲಿ ತನ್ನ ದೇಹದೊಳಗಿಟ್ಟು ಸಾಗಾಟ ಮಾಡಿದ್ದ. ಅಧಿಕಾರಿಗಳು ಮುಂದಿನ ಕ್ರಮ ಜರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net