Gold, Silver Price; ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸಿ ಹಬ್ಬದ ಸಂಭ್ರಮ ಡಬಲ್ ಮಾಡಿ...

gold and money
ಸಾಂದರ್ಭಿಕ ಚಿತ್ರ
Published on

ಬೆಂಗಳೂರು:ಹಬ್ಬದ ದಿನಗಳು ಹತ್ತಿರ ಬಂದಾಗ ಚಿನ್ನ, ಬೆಳ್ಳಿ ಖರೀದಿ ಮಾಡುವುದು ಭಾರತೀಯ ಸಂಸ್ಕೃತಿಯ ಭಾಗವಾಗಿರುವುದು ಸುಳ್ಳಲ್ಲ. ಹಬ್ಬದ ದಿನಗಳಲ್ಲಿ ಚಿನ್ನಾಭರಣ ಖರೀದಿ ಮಾಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ. ಅಲ್ಲದೇ ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದೂ ನಂಬಲಾಗುತ್ತದೆ. ಈ ವರ್ಷ ದೀಪಾವಳಿ ಸಂಭ್ರಮ ಹೆಚ್ಚಲು ಚಿನ್ನದ ಬೆಲೆಯೂ ಕಾರಣವಾಗಬಹುದು. ಯಾಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಕುಸಿತವಾಗುತ್ತಲೇ ಇದೆ. ಬೆಳ್ಳಿ ಕೂಡ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,450 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,490ರೂ.

ಬೆಳ್ಳಿ ಬೆಲೆ 1 ಕೆಜಿ: 71,750 ರೂ.

ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 55,360 ರೂಪಾಯಿ ಇತ್ತು. ಆದರೆ ಇಂದು 55,450 ರೂಪಾಯಿ ಆಗಿದೆ.  ನಿನ್ನೆ ಇದ್ದ ಬೆಲೆ 90 ರೂಪಾಯಿ ಇಳಿಕೆಯಾಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 60.590 ರೂಪಾಯಿ ಇತ್ತು. ಆದರೆ ಇಂದು 60,490ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ 100 ರೂಪಾಯಿ ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಬೆಂಗಳೂರು:55,450ರೂ.

ಮುಂಬೈ: 55,450 ರೂ.

ದೆಹಲಿ: 55,600 ರೂ.

ಕೇರಳ: 55,450 ರೂ.

ಅಹ್ಮದಾಬಾದ್: 55,500 ರೂ

ಜೈಪುರ್: 55,600 ರೂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net