

ರಬಕವಿ/ಬನಹಟ್ಟಿ: ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದ ನೂತನವಾಗಿ ಬಂಗಾರ ಲೇಪಿತ ಕಲಶೋತ್ಸವ ಪ್ರತಿಷ್ಠಾಪನೆ ಡಿ.19 ರಂದು ಬೆಳಗ್ಗೆ ಅದ್ದೂರಿಯಾಗಿ ನಡೆಯಲಿದೆ.
ದೇವಸ್ಥಾನಕ್ಕೆ ನಗರದ ಮಹಾಂತೇಶ ಯಾದವಾಡ ಪರಿವಾರದವರು 26 ಕೆಜಿ ತೂಕ ಹೊಂದಿರುವ ನಾಲ್ಕೂವರೆ ಅಡಿಯಷ್ಟು ಎತ್ತರ ಹೊಂದಿದ ಕಲಶವನ್ನು ಮಂಗಳವಾರ ಬೆಳಗ್ಗೆ 8 ಗಂಟೆಗೆ ಕೊಲ್ಲಾಪುರದ ಶ್ರೀ ಕನ್ಹೇರಿ ಮಠದ ಶ್ರೀ ಅದೃಷ್ಯ ಕಾಡಸಿದ್ಧೇಶ್ವರ ಶ್ರೀಗಳು ಕಲಶಾರೋಹಣ ನೆರವೇರಿಸುವರು ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.