ಚಿನ್ನ ಗಿರವಿ ಇರಿಸಿಕೊಂಡು ವಂಚನೆ

Published on

ಮೈಸೂರು: ಗಿರವಿ ಇಟ್ಟಿರುವ ಚಿನ್ನಾಭರಣಗಳನ್ನು ಕಡಿಮೆ ಬಡ್ಡಿಗೆ ಇರಿಸುವುದಾಗಿ ನಂಬಿಸಿ 123 ಗ್ರಾಂ ಚಿನ್ನಾಭರಣವನ್ನು ವಂಚಿಸಿದ ಸಂಬಂಧ ದೂರು ನೀಡಲಾಗಿದೆ.

ಕನ್ನಂಬಾಡಿಯ ಚಂದ್ರಶೇಖರ್ ಅವರು ಕೆ.ಆರ್.ಮೊಹಲ್ಲಾದ ಧನಲಕ್ಷ್ಮಿ ಗೋಲ್ಡ್ ಕಂಪನಿಯ ಯೋಗೇಶ್ ವಂಚನೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.

ನಮ್ಮಲ್ಲಿ ಅಡವಿಟ್ಟಿರುವ ಚಿನ್ನವನ್ನು ಬಿಡಿಸಿ ಕಡಿಮೆ ಬಡ್ಡಿಗೆ ಇಟ್ಟುಕೊಳ್ಳಲಾಗುವುದು. ನಿಮ್ಮ ಚಿನ್ನ ಕೂಡ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿ ಚಿನ್ನಾಭರಣವನ್ನು ಇವರ ಸಂಸ್ಥೆಯಲ್ಲಿಟ್ಟಿದ್ದು, ವಾಪಸ್ ಬಿಡಿಸಿಕೊಳ್ಳಲು ಸಂಪರ್ಕಿಸಲು ಯತ್ನಿಸಿದರೆ ಅವರು ಸಿಗದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net