ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಕಳವು

Published on

ಮೈಸೂರು: ತಾಲೂಕಿನ ಮೆಲ್ಲಹಳ್ಳಿಯ ಬೊಮ್ಮರದಮ್ಮ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿದ ಕಳ್ಳರು, 80 ಸಾವಿರ ರೂ.ಮೌಲ್ಯದ ನಗದು, ಚಿನ್ನಾಭರಣ ದೋಚಿದ್ದಾರೆ.

ಬೀಗ ಮುರಿದು ಒಳ ನುಗ್ಗಿದ ಕಳ್ಳರು, 3 ಸಾವಿರ ರೂ. ನಗದು ಮತ್ತು ದೇವಿಯ 80 ಸಾವಿರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ದೂರು ನೀಡಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net