

ರಾಯಚೂರು ಕಡು ಬಡತನದಲ್ಲಿ ಜನಿಸಿ ತಾಯಿಯ ಜತೆಗೆ ಸಣ್ಣ ಹೋಟೆಲ್‌ನಲ್ಲಿ ದುಡಿದು ಅಭ್ಯಾಸ ಮಾಡಿದ ಗಾಯತ್ರಿಗೆ ಬಿಎಸ್ಸಿ ಕೃಷಿಯಲ್ಲಿ 4 ಚಿನ್ನದ ಪಡೆದಿದ್ದರಿಂದ ಕುಟುಂಬಸ್ಥರು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಲ್ಲಿ ಮಗಳಿಗೆ ಮುದ್ದಡುವ ಮೂಲಕ ಸಂಭ್ರಮಾಚರಣೆ ಮಾಡಿದರು.
ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಜರುಗಿದ 14 ನೇ ಘಟಿಕೋತ್ಸವದಲ್ಲಿ ದೆಹಲಿಯ ಭಾರತೀಯ ವಿಶ್ವ ವಿದ್ಯಾಲಯಗಳ ಒಕ್ಕೂಟದ ಮಹಾ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ ಅವರು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿವೆ ಪದವಿಯನ್ನು ವಿತರಣೆ ಮಾಡಿದರು.
ಗಾಯತ್ರಿ ಮೂಲತಃ ಕೊಪ್ಪಳ ಜಿಲ್ಲೆಯ ಕುದುಮೊತಿ ಗ್ರಾಮದಲ್ಲಿ ಕಡುಬಟತನದಲ್ಲಿ ಜನಿಸಿದ್ದು ತಂದೆ ಚಿಕ್ಕವಯಸ್ಸಿನಲ್ಲಿ ತಿರಿಕೊಂಡಿದ್ದರಿಂದ ತಾಯಿಯ ಜತೆಗೆ ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಬಿಎಸ್ಸಿ ಕೃಷಿಯಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದು, ಮುಂದೆ ಕೃಷಿಯಲ್ಲಿ ಸಾಧನೆ ಮಾಡಿ ಕೃಷಿ ವಿಜ್ಞಾನಿಯಾಗಿ ಕಲ್ಯಾಣ ಕರ್ನಾಟಕದ ರೈತರಿಗೆ ಅನುಕೂಲವಾಗುವಂತ ಬೆಳೆಗಳ ಮೇಲೆ ಸಂಶೋಧನೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ.
ಆದೇ ರೀತಿ ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಬಸ್ಸಪುರು ಗ್ರಾಮದ ಪುಟ್ಟರಾಜು ಪೊಲೀಸ್ ಪಾಟೀಲ್ ಅವರು ತಮ್ಮ ತಂದೆಯ 1.5 ಎಕರೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಕೃಷಿಯಲ್ಲಿ ತಂದೆಯ ಪ್ರರಣೆಯಂತೆ ಬಿ.ಟೆಕ್ ಆಗ್ರಿಯಲ್ಲಿ ಒಟ್ಟು 06 ಚಿನ್ನದ ಪದಕ ಹಾಗೂಎರಡು ನಗದು ಬಹುಮಾನ ಪಡೆದಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಐಎಎಸ್ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳತಿದ್ದು, ಜಿಲ್ಲಾಧಿಕಾರಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವ ಕನಸು ಕಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಭೀಮರಾಯನ ಗುಡಿ ಕಾಲೇಜಿನ ವಿದ್ಯಾರ್ಥಿ ಸಾಗರ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಾಹಪುರದರಾಗಿದ್ದು, ತಂದೆ ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ತಾಯಿ ವಸತಿ ನಿಲಯದಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಜಿಲ್ಲೆಯ ಎನ್ನುವ ಹಣೆ ಪಟ್ಟಿ ಹೊಂದಿದ ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿ ರೈತರಿಗೆ ಮಾದರಿ ಬೆಳೆಗಳನ್ನು ಪರಿಚಯ ಮಾಡುವ ಸಲುವಾಗಿ ಕೃಷಿ ಆಯ್ಕೆ ಮಾಡಿಕೊಂಡಿದ್ದು, ಮುಂದೆ ಕೃಷಿ ವಿಜ್ಞಾನಿಯಾಗುವ ಕನಸು ಕಂಡಿದ್ದಾರೆ.
527 ಪದವಿ ಹಾಗೂ 59 ಚಿನ್ನದ ಪದಕ ಈ ಘಟಿಕೋತ್ಸವದಲ್ಲಿ ಕೃಷಿಯಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಯಿತು. ಸ್ನಾತಕ ಪದವಿಯಲ್ಲಿ 27 ಚಿನ್ನದ ಪದಕಗಳು, ಇಬ್ಬರಿಗೆ ನಗದು ಬಹುಮಾನ ನೀಡಲಾಯಿತು. ರಾಯಚೂರು ಕೃಷಿ ವಿವಿಯ ಗಾಯತ್ರಿ ಅವರು ಬಿಎಸ್ಸಿ ಪದವಿಯಲ್ಲಿ 04 ಚಿನ್ನದ ಪದಕ, ಲಾಲ್ಸಾಬ್ ನಾದಫ್ 01 ಚಿನ್ನದ ಪದಕ, ಭೀಮರಾಯನ ಗುಡಿ ಕಾಲೇಜಿನ ಸಾಗರ ಅವರು 06 ಚಿನ್ನದ ಪದಕ, ಶಿವರಾಜ ವಿ.ಸಜ್ಜನರ್, ಅಜ್ಜಯ್ಯ ಎಂ,ಮೇಘ ಎಂ.ಸಜ್ಜನ್, ಮಾಲಾಶ್ರೀ, ಪ್ರಸನ್ನ, ಅಂಬಿಕಾ ಅವರು ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ.
ಬಿ.ಟೆಕ್ ಅಗ್ರಿಯಲ್ಲಿ ಪುಟ್ಟರಾಜು ಪೊಲೀಸ್ ಪಾಟೀಲ್ ಅವರು 06 ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ, ಆಪ್ರಿಯಾ ಜುಬೇನ್ ಮತ್ತು ಮಲ್ಲೇಶ್ ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ. ಅದೇ ರೀತಿ ಸ್ನಾತಕೋತ್ತರ ಪದವಿಯಲ್ಲಿ ಅನೂಫ್ ಮ್ಯಾರಿ, ವಿಲ್ಸನ್ ಬ್ರೋನಿ, ಹರಿಷಿಣಿ ವಿ,ಅರ್ಪಿತಾ, ಆರ್‌ಪಿ.ಪ್ರಗತಿ, ಶಿಲ್ಪಾ, ಅಂದುಲ್ಲಾ, ಆದ್ರೇಶ್ ಬಿನ್ನಿ, ಬಸವರಾಜ ಡಿ, ಕುಶಾಲ್,ಅನಿಲ್,ವಿದ್ಯಾ, ಅಕ್ಕಿಶೆಟ್ಟಿ ತಲಾ ಒಂದು ಚಿನ್ನದ ಪದಕ ಪಡೆದರೆ, ಅಭಿಲಾಷ ಅವರು 03 ಚಿನ್ನದ ಪಡೆದಿದ್ದಾರೆ. ಇನ್ನು ಪಿಎಚ್‌ಡಿ ಪದವಿಯಲ್ಲಿ ಸುಶ್ಮಿತಾ ಕೆ.ಎಸ್, ಜಿ. ಶಾಮ್ ಸುಪ್ರೀತ್, ಪರಶುರಾಮ, ಚಿತ್ರ, ಪ್ರತಿಮಾ, ವಿನಯಾ, ರವಿತೇಜ, ಚನ್ನಬಸವ, ರಂಜನ್, ಜೋಷಿ, ಕೃಷ್ಣ ಕುಮಾರ್ ತಲಾ ಒಂದು ಚಿನ್ನದ ಪದಕ ಪಡೆದರೆ,ಕಾವ್ಯ ಟಿ. ಅವರು ಎರಡು ಚಿನ್ನದ ಪದಕ ಪಡೆದಿದ್ದಾರೆ.ಮೊದಲ ಬಾರಿಗೆ ಗೌರವ ಡಾಕ್ಟರೇಟ್
ರಾಯಚೂರು ಕೃಷಿ ವಿಜ್ಞಾನಗಳ ವಿವಿಯ 14 ನೇ ಘಟಿಕೋತ್ಸವದಲ್ಲಿ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು. ಕೇವಲ 10 ನೇ ತರಗತಿ ಓದಿರುವ ರೈತ ದೇವೇಂದ್ರಪ್ಪ ಅವರು ತಮ್ಮ 14 ಎಕರೆ ಜಮೀನಿನಲ್ಲಿ ಸಾವಯವ ಕೃಷಿ, 120 ಎಕರೆಯಲ್ಲಿ ಶೂನ್ಯ ಬಂಡವಾಳದ ಬೇಸಾಯ, ನೈಸರ್ಗಿಕ ಕೃಷಿ ಮಾಡುವ ಮೂಲಕ ಕೃಷಿಯಲ್ಲೂ ಲಾಭವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿವಿ ರೈತನನ್ನು ಹುಡುಕಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ದುರುಗೇಶ ಇದ್ದರು.