

ಉಡುಪಿ: ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು ಮೇ 15ರಿಂದ 19ರ ವರೆಗೆ ದೆಹಲಿಯ ದ್ವಾರಕಾದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ 'ಭಾರತ ಕೌಶಲ ಸ್ಪರ್ಧೆ' (ಇಂಡಿಯಾ ಸ್ಕಿಲ್ಸ್)ಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಉಡುಪಿಯ ರೋಹನ್ ಕೋಟ್ಯಾನ್, ಡ್ರೋನ್ ಫಿಲ್ಮ್ ಮೇಕಿಂಗ್'ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಫ್ರಾನ್ಸ್ನ ಲಿಯೋದಲ್ಲಿ ನಡೆಯಲಿರುವ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ನಿವಾಸಿ ಶಶಿಧರ ಕೋಟ್ಯಾನ್ ಮತ್ತು ವಸುಧಾ ಕೋಟ್ಯಾನ್ ದಂಪತಿ ಪುತ್ರನಾದ ರೋಹನ್, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ನಲ್ಲಿ ಬಿಎ ಇನ್ ಮಾಸ್ ಮೀಡಿಯಾ ಆ್ಯಂಡ್ ಕಮ್ಯುನಿಕೇಷನ್ ವ್ಯಾಸಂಗ ಮಾಡುತ್ತಿದ್ದಾರೆ.
ಜಿಲ್ಲೆಗೆ ಹೆಮ್ಮೆತಂದ ರೋಹನ್ ಅವರನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಅ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಶುಭ ಹಾರೈಸಿದ್ದಾರೆ.