ಡಾ.ಅನಘಾ ನಿಡುಗಾಲಗೆ ಎಂಬಿಬಿಎಸ್‌ನಲ್ಲಿ ಸ್ವರ್ಣ ಪದಕ : ಅಂತಿಮ ವರ್ಷದ ತನಕ ಸತತ ಗೋಲ್ಡ್ ಮೆಡಲ್ ಪಡೆದ ಸಾಧಕಿ

convocation
Published on

ಸುಬ್ರಹ್ಮಣ್ಯ: ಮೂಲತಃ ಕುಕ್ಕೆ ಸುಬ್ರಹ್ಮಣ್ಯದ ಅಗ್ರಹಾರದ ನಿಡುಗಾಲ ನಿವಾಸಿಯಾಗಿದ್ದು, ಪ್ರಸ್ತುತ ತಮಿಳುನಾಡಿನ ವೆಲ್ಲೂರಿನಲ್ಲಿರುವ

ಡಾ.ಅನಘಾ ನಿಡುಗಾಲ ಶ್ಯಾಮ್‌ಕುಮಾರ್ ಅವರಿಗೆ ತಮಿಳುನಾಡು ಎಂ.ಜಿ.ಆರ್. ಮೆಡಿಕಲ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ಡಾ.ಗೋವಿಂದರಾಜುಲು ಸ್ಮಾರಕ ಚಿನ್ನದ ಪದಕ ಲಭಿಸಿದೆ.

ಪುರಸ್ಕಾರದ ಪ್ರಮಾಣಪತ್ರ ಮತ್ತು ಚಿನ್ನದ ಪದಕವನ್ನು ಎಂಜಿಆರ್ ವಿವಿಯ 37ನೇ ಘಟಿಕೋತ್ಸವದಲ್ಲಿ ತಮಿಳುನಾಡಿನ ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ರವಿ ಪ್ರದಾನ ಮಾಡಿದರು.

ಎಲ್ಲ ಪರೀಕ್ಷೆಗಳಲ್ಲಿ ಪ್ರಥಮದ ಸಾಧನೆ: ಎಸ್‌ಎಸ್‌ಪಿಯು ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಸುಬ್ರಹ್ಮಣ್ಯದ ಅಗ್ರಹಾರದ ವಿದ್ವಾನ್ ಕೇಶವ ಭಟ್ ನಿಡುಗಾಲ ಅವರ ಮೊಮ್ಮಗಳು, ಕನ್ನಡ ಪಂಡಿತರ ಪುತ್ರ ಡಾ.ಶ್ಯಾಮ್‌ಕುಮಾರ್ ಎನ್.ಕೆ ನಿಡುಗಾಲ ಮತ್ತು ಡಾ.ಅಪರ್ಣಾ ಶ್ಯಾಮ್‌ಕುಮಾರ್ ಅವರ ಪುತ್ರಿಯಾಗಿರುವ ಡಾ.ಅನಘಾ ತಮಿಳುನಾಡಿನ ಎಂ.ಜಿ.ಆರ್. ವಿಶ್ವವಿದ್ಯಾಲಯದ ವೆಲ್ಲೂರು ಸಿ.ಎಂ.ಸಿ ಮೆಡಿಕಲ್ ಇನ್‌ಸ್ಟಿಟ್ಯೂಶನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ, ಅಂತಿಮ ಎಂಬಿಬಿಎಸ್ ಪರೀಕ್ಷೆ ಬರೆದು ಅತ್ಯಧಿಕ ಅಂಕದೊಂದಿಗೆ ರ‌್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಡಾ.ಅನಘಾ ಅವರು ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷೆಯಿಂದ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯ ತನಕ ನಡೆದ ಎಲ್ಲ ವರ್ಷದ ಅಂತಿಮ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗೊಂದಿಗೆ ವಿವಿಗೆ ಪ್ರಥಮ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಈಗ ಎಂ.ಡಿ. ವ್ಯಾಸಂಗ ಮಾಡುತ್ತಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net