ಕೊಡಗಿನ ವಿದ್ಯಾರ್ಥಿಗೆ ನಾಗಲ್ಯಾಂಡ್ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ

25spt1- Rohan
ಎಚ್.ಎಂ.ರೋಹನ್
Published on

ಸೋಮವಾರಪೇಟೆ: ನಾಗಲ್ಯಾಂಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ(ಕೃಷಿ)ಯಲ್ಲಿ ಕೊಡಗು ಜಿಲ್ಲೆಯ ವಿದ್ಯಾರ್ಥಿ ಚಿನ್ನದ ಪದಕ ಪಡೆದಿದ್ದಾರೆ.

ಸೋಮವಾರಪೇಟೆ ತಾಲೂಕಿನ ದೊಡ್ಡತೋಳೂರು ಗ್ರಾಮದ ಪ್ರಗತಿಪರ ಕೃಷಿಕ ಮೋಹನ್ ಮತ್ತು ಮಾಲಿನಿ ದಂಪತಿ ಪುತ್ರ ಎಚ್.ಎಂ.ರೋಹನ್ ಚಿನ್ನದ ಪದಕ ಪಡೆದ ವಿದ್ಯಾರ್ಥಿ.

ನಾಗಲ್ಯಾಂಡ್‌ನ ಸ್ಕೂಲ್ ಆ್ ಅಗ್ರಿಕಲ್ಚರಲ್ ಸೈನ್ಸ್ ಆ್ಯಂಡ್ ರೂರಲ್ ಡೆವಲೆಪ್‌ಮೆಂಟ್ ಕಾಲೇಜಿನಲ್ಲಿ ಎಂಎಸ್ಸಿ ್ರೂಟ್ ಸೈನ್ಸ್ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮಾ.22ರಂದು ನಾಗಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ನಡೆದ 6ನೇ ಘಟಿಕೋತ್ಸವದಲ್ಲಿ ನಾಗಲ್ಯಾಂಡ್ ರಾಜ್ಯಪಾಲ ಲಾ ಗಣೇಶನ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.

ರೋಹನ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸೋಮವಾರಪೇಟೆ ಓಎಲ್‌ವಿ ಕಾನ್ವೆಂಟ್ ಮತ್ತು ಸಂತ ಜೋಸೆರ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಜಿಕೆವಿಕೆಯಲ್ಲಿ ಬಿ.ಎಸ್ಸಿ(ಕೃಷಿ) ವ್ಯಾಸಂಗ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net