

ಹುಬ್ಬಳ್ಳಿ: ಗೊಜು ರಿಯೂ ಕರಾಟೆ ಡು ಕೆನೆರಿಯೋ ಕಾನ್ ಇಂಡಿಯಾ ಸಂಸ್ಥೆ ವತಿಯಿಂದ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿನಾಯಕ ಹೂಗಾರ ಕಾಟಾ ವಿಭಾಗದಲ್ಲಿ ಬಂಗಾರ ಮತ್ತು ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾನೆ. ಇದಕ್ಕೂ ಮೊದಲು ಅಂತರಜಿಲ್ಲಾ, ರಾಜ್ಯ ಸೇರಿ ಹಲವು ಪಂದ್ಯಾವಳಿಯ ಕಾಟಾ, ಕುಮಿಟೆ, ಫೈಟ್ ವಿಭಾಗದಲ್ಲಿ ಬಂಗಾರ ಮತ್ತು ಬೆಳ್ಳಿ ಪದಕ ಪಡೆದಿದ್ದಾನೆ. ಏವಿನ್ ಯಲಿಗಾರ ಅವರು ಸತತ 5 ವರ್ಷದಿಂದ ತರಬೇತಿ ನೀಡುತ್ತಿದ್ದಾರೆ.