ಶ್ವೇತಾ ಅಣ್ಣಿಕೇರಿಗೆ ಚಿನ್ನದ ಪದಕ

17 hly 1 KUSTI
Published on

ಹಳಿಯಾಳ: ಹರಿಯಾಣದ ರೊಹ್ಟಕ್​ನಲ್ಲಿ ಆ. 16ರಂದು 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳದ ಶ್ವೇತಾ ಅಣ್ಣಿಕೇರಿ 50 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾಳೆ.

ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿರುವ ಮಾಜಿ ಕುಸ್ತಿಪಟು ಸಂಜು ಅಣ್ಣಿಕೇರಿ ಅವರ ಮಗಳಾಗಿರುವ ಅಂತಾರಾಷ್ಟ್ರೀಯ ಕುಸ್ತಿ ಪಟು ಶ್ವೇತಾ, ಸದ್ಯ ದಾಂಡೇಲಿಯ ಸರ್ಕಾರಿ ಕಾಲೇಜ್​ನಲ್ಲಿ ಪದವಿ ಅಭ್ಯಸಿಸುತ್ತಿದ್ದಾಳೆ. ಹಳಿಯಾಳದ ಕುಸ್ತಿ ವಸತಿ ಶಾಲೆಯಲ್ಲಿ ತರಬೇತಿ ಬಳಿಕ ಪುಣೆಯ ಮಾಂಜ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಕರ್ನಾಟಕ ಕುಸ್ತಿ ತಂಡದ ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ ಶ್ವೇತಾ ರಾಷ್ಟ್ರ ಮಟ್ಟದಲ್ಲಿ 50 ಕೆಜಿ ವಿಭಾಗದಲ್ಲಿ ಮಿಂಚಿದ್ದು ಪ್ರಥಮ ಸ್ಥಾನದೊಂದಿಗೆ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net