ಮೇ.ಸುಮುಖ್ ಸ್ವರೂಪ್‌ಗೆ ಚಿನ್ನದ ಪದಕ

sumuk svarup
Published on


ಮಡಿಕೇರಿ: ಮಡಿಕೇರಿ ಮೂಲದ ಮೇಜರ್ ಸುಮುಖ್ ಸ್ವರೂಪ್ ಚೆನ್ನೈನ ಐಐಟಿ ಮದ್ರಾಸ್‌ನಲ್ಲಿ ಎಂ.ಟೆಕ್ ಪದವಿಯನ್ನು ಶೇ.೯೧ ಅಂಕಗಳಿಸಿ ತೇರ್ಗಡೆ ಹೊಂದಿದ್ದಾರೆ.

ಆಂತರಿಕ ಕರ್ಮಯೋಗ ವಿಭಾಗದಲ್ಲಿ ಚಿನ್ನದ ಪದಕವನ್ನುಗಳಿಸಿರುವ ಸ್ವರೂಪ್ ಚೆನ್ನೈನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದುಕೊಂಡರು. ಭಾರತೀಯ ಭೂಸೇನೆಯಲ್ಲಿ ಅಧಿಕಾರಿಯಾಗಿರುವ ಇವರು ದಿ.ಸಿ.ಎಸ್.ರಾಮ್ ಸ್ವರೂಪ್ ಮತ್ತು ಸಿ.ಆರ್.ವಿದ್ಯಾ ದಂಪತಿಯ ಪುತ್ರತಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net