

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೈದರಾಬಾದ್ನ ಸ್ಪೋರ್ಟ್ಸ್ ಅಥಾರಿಟಿ ಆ್ ತೆಲಂಗಾಣದ ಇಂಟರ್ ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾಗಂಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 1ನೇ ೆಡರೇಶನ್ ಕಪ್ ನ್ಯಾಷನಲ್ ಅಥ್ಲೆಟಿಕ್ಸ್ ಮಾಸ್ಟರ್ ಗೇಮ್ಸ್&2024ರಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಧಾರವಾಡದ ಮಲ್ಲಪ್ಪ ಪೂಜೇರ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು, ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ಗೆ ಆಯ್ಕೆಯಾಗಿದ್ದಾರೆ ಎಂದು ಕ್ರೀಡಾಪ್ರೇಮಿ ಅಶೋಕ ಪಾಟೀಲ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1ನೇ ಡರೇಶನ್ ಕಪ್ ನ್ಯಾಷನಲ್ ಅಥ್ಲೆಟಿಕ್ಸ್ ಮಾಸ್ಟರ್ ಗೇಮ್ಸ್ನಲ್ಲಿ ಮಲ್ಲಪ್ಪ ಅವರು, 5 ಕಿ.ಮೀ., 10 ಕಿ.ಮೀ., 3 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮಲ್ಲಪ್ಪ ಉತ್ಸಾಹಿ ಕ್ರೀಡಾಪಟುವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ವಿಶ್ವ ಮಾಸ್ಟರ್ ಅಥ್ಲೇಟಿಕ್ಸ್ನಲ್ಲಿ ಭಾಗವಹಿಸಲು ಮುಂದಿನ ದಿನಗಳಲ್ಲಿ ಅಮೆರಿಕಾಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರಿಗೆ ಅಗತ್ಯ ಆಥಿರ್ಕ ನೆರವು ಬೇಕಿದೆ ಎಂದರು.
ಕ್ರೀಡಾಪಟು ಮಲ್ಲಪ್ಪ ಪೂಜೇರ ಮಾತನಾಡಿ, ಹಲವು ವರ್ಷಗಳಿಂದ ವಿವಿಧ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಪದಕ ಪಡೆದಿದ್ದೇನೆ. ಹೀಗಾಗಿ ಸರ್ಕಾರ ನನ್ನ ಕ್ರೀಡಾ ಸಾಧನೆ ಗುರುತಿಸಿ ಸರ್ಕಾರಿ ನೌಕರಿ ಅಥವಾ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಇದರಿಂದ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಲು ಸಹಾಯವಾಗಲಿದೆ ಎಂದರು.
ಮಲ್ಲಿಕಾರ್ಜುನ ಮರಿತಮ್ಮನವರ, ಬಸವರಾಜ, ವೆಂಕಟೇಶ, ಶರಣ ಕಾಳೆ ಇತರರು ಇದ್ದರು.