ಡಾ.ಮೇಘನಾಗೆ ಚಿನ್ನದ ಪದಕ

sdp Meghana
Published on

ಸಿದ್ದಾಪುರ: ತಾಲೂಕಿನ ಕವಂಚೂರು ಹಿತ್ತಲಕೊಪ್ಪದ ಡಾ.ಮೇಘನಾ ಟಿ.ಎಚ್. ಅವರು ಎಂಡಿಎಸ್ ಪೀಡೋಡೊಂಟಿಕ್ಸ್​ನಲ್ಲಿ ಅತ್ಯುತ್ತಮ ಅಂಕ ಪಡೆದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ (ಆರ್​ಜಿಯುಎಚ್​ಎಸ್) ಬಂಗಾರದ ಪದಕ ಸ್ವೀಕರಿಸಿದ್ದಾರೆ.

ಅವರು ಏಷ್ಯಾ ಪ್ರಾಂತ್ಯದಿಂದ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಪಿಯರ್ ಫೌಚಾರ್ಡ್ ಅಕಾಡೆಮಿ ಪೋಸ್ಟ್ ಗ್ಯಾಜುಯೇಟ್ ಸ್ಟೂಡೆಂಟ್ ಮೆರಿಟ್ ಅವಾರ್ಡ್​ಗೂ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ತಮ್ಮ ಪದವಿ ಮತ್ತು ಸ್ನಾತಕೋತ್ತರ ಅಭ್ಯಾಸಗಳಲ್ಲಿ ಶ್ರೇಷ್ಠ ವಿದ್ಯಾರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದ ಡಾ.ಮೇಘನಾ ಅವರು, 2021ರಲ್ಲಿ ಬಿಡಿಎಸ್ ಪದವಿಯಲ್ಲಿ ಅತ್ಯುನ್ನತ ಅಂಕ ಗಳಿಸಿ ಆರ್​ಜಿಯುಎಚ್​ಎಸ್ ಬಂಗಾರದ ಪದಕ ಪಡೆದುಕೊಂಡಿದ್ದರು.

ಡಾ.ಮೇಘನಾ ಅವರು ಸಿದ್ದಾಪುರ ತಾಲೂಕಿನ ಕವಂಚೂರು ಹಿತ್ತಲಕೊಪ್ಪದ ನಿವಾಸಿ ತಿಮ್ಮಪ್ಪ ಎಂ.ಕೆ. ಹಾಗೂ ದುಗಡಿಕೊಪ್ಪ ಶಾಲಾ ಶಿಕ್ಷಕಿ ಭಾರತಿ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net