ಅಮೀನಾ ಹತ್ತರಕಿಹಾಳಗೆ ಚಿನ್ನದ ಪದಕ

Gold medal for Ameena Hattarakiha
ಅಮೀನಾ ಹತ್ತರಕಿಹಾಳ
Published on

ಗೊಳಸಂಗಿ: ಗ್ರಾಮದ ಪ್ರಗತಿಪರ ರೈತ ಹುಸೇನಬಾಷಾ ಪಾಶಾಲಾಲ ಹತ್ತರಕಿಹಾಳ ಅವರ ಸುಪುತ್ರಿ ಅಮೀನಾ ಹುಸೇನಬಾಷಾ ಹತ್ತರಕಿಹಾಳ ಅವರಿಗೆ ಚಿನ್ನದ ಪದಕ ಲಭಿಸಿದೆ.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಯ ಕನ್ನಡ ವ್ಯಾಕರಣದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರು ಗುರುವಾರ ಚಿನ್ನದ ಪದಕ ನೀಡಿ ಗೌರವಿಸಿದರು.

ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಕಾ.ಹು.ಬಿಜಾಪುರ ಅವರ ಮೊಮ್ಮಗಳಾದ ಅಮೀನಾ ಹತ್ತರಕಿಹಾಳ ಸಾಧನೆಗೆ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ.ನಾಗರಾಜ್​, ಪ್ರಾಧ್ಯಾಪಕ ಡಾ.ಮಹೇಶ ಚಿಂತಾಮಣಿ, ಡಾ.ನಾರಾಯಣ ಪವಾರ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net