ಆಳ್ವಾಸ್‌ಗೆ ಗೋಲ್ಡ್ ಮೆಡಲ್ ಬಾಲ್‌ಬ್ಯಾಡ್ಮಿಂಟನ್ ಪ್ರಶಸ್ತಿ

New Project
Published on

ಮೂಡುಬಿದಿರೆ: ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಟೂರ್ನ್‌ಮೆಂಟ್‌ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮೇರಿ ಗೋ ರೌಂಡ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್‌ನ 50ನೇ ವರ್ಷದ ಸಂಭ್ರವಾಚರಣೆ ಸಲುವಾಗಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಆಳ್ವಾಸ್ ತಂಡ ತಮಿಳುನಾಡಿನ ಪಿಎಸ್‌ಎನ್‌ಎ ದಿಂಡಿಗಲ್ ತಂಡವನ್ನು 35-31 ಅಂಕಗಳಿಂದ ಮಣಿಸಿ ಗೋಲ್ಡ್ ಮೆಡಲ್ ಪ್ರಶಸ್ತಿ ಪಡೆದುಕೊಂಡಿತು.

ವಿಜೇತ ಆಳ್ವಾಸ್ ತಂಡ ಸೂಪರ್ ಲೀಗ್ ಹಾಗೂ ಇತರ ಪಂದ್ಯಗಳಲ್ಲಿ ಆತಿಥೇಯ ಮೇರಿ ಗೋ ರೌಂಡ್ ಹಾಗೂ ಟಿಬಿಬಿಸಿ ತಿರುವತ್ತೂರು ತಂಡಗಳನ್ನು ಸೋಲಿಸಿತ್ತು. ಟೂರ್ನಿಯಲ್ಲಿ ರಾಷ್ಟ್ರದ 10 ಪ್ರಮುಖ ಆಹ್ವಾನಿತ ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ತಂಡದ ಲಕ್ಷ್ಮೀದೇವಿ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net