ಪ್ರಸ್ತಕ ಹಣಕಾಸು ಸಾಲಿನಿಂದ ಬಂಗಾರದ ಮೇಲೆ ಸಾಲ

ctd 111111
Published on

ಚಿತ್ರದುರ್ಗ: ನಗರದ ಟೌನ್ ಕೋ-ಆಪರೇಟಿವ್ ಸೊಸೈಟಿ 2021-22ನೇ ಸಾಲಿನಲ್ಲಿ 10.33 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಹೇಳಿದರು. ನಗರದ ಟೌನ್ ಕೋ-ಆಪರೇಟಿವ್ ಸೊಸೈಟಿ ಆವರಣದಲ್ಲಿ ಭಾನುವಾರ ಸೊಸೈಟಿ 105ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,ಪ್ರಸಕ್ತ ಹಣಕಾಸು ಸಾಲಿನಿಂದ ಬಂಗಾರದ ಅಡಮಾನ ಸಾಲ ಮತ್ತು ಸೇಫ್‌ಲಾಕರ್ ಸೌಲಭ್ಯ ಕಲ್ಪಿ ಸಲಾಗುವುದು.

ಕಳೆದ ಮಾರ್ಚ್ ಅಂತ್ಯಕ್ಕೆ 38.97ಲಕ್ಷ ರೂ.ಷೇರು ಬಂಡವಾಳವಿದ್ದು,ಆಪದ್ಧನ ನಿಧಿ 12,29 ಲಕ್ಷ ರೂ.ಹಾಗೂ ಇತರೆ ನಿಧಿಗಳ ಮೊತ್ತ 49.72 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ 2.74 ಕೋಟಿ ರೂ.ಇದ್ದ ಠೇವಣಿ ಮೊತ್ತ ಕಳೆದ ಮಾರ್ಚ್ ಅಂತ್ಯಕ್ಕೆ 3.62 ಕೋಟಿ ರೂ.ಗೆ ತಲುಪಿದ್ದು,ಇದೇ ಅವಧಿಗೆ ಸೊಸೈಟಿಗೆ ಬರ ಬೇಕಾಗಿರುವ ಸಾಲದ ಮೊತ್ತ 1.48 ಕೋಟಿ ರೂ.ಗಳಿದೆ.

ಇನ್ನು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಬೇಕಿದೆ.

ಗೃಹ,ವಾಹನ ಹಾಗೂ ಜಾಮೀನು ಸಾಲ ನೀಡಲಾಗುತ್ತಿದೆ. ಈ ವರ್ಷದಿಂದ ಬಂಗಾರದ ಮೇಲೆ ಶೇ.10 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅಕ್ಟೋಬರ್ 10/11 ರಂದು ಸಂಘದ ಶತಮಾನೋತ್ಸವ ಸಮಾ ರಂಭ ಆಚರಿಸಲಾಗುವುದು. ಸೂಪರ್ ಮಾರುಕಟ್ಟೆ ನಿರ್ಮಾಣ ಹಾಗೂ ಸೊಸೈಟಿ ಮುಂದಿನ ಉದ್ಯಾನದ ಅಭಿವೃದ್ಧಿ ವಿಷಯ ಗಮನ ದಲ್ಲಿದೆ ಎಂದರು.

ಸೊಸೈಟಿ ಉಪಾಧ್ಯಕ್ಷ ಡಾ.ರಹಮತ್‌ಉಲ್ಲಾ,ನಿರ್ದೇಶಕರಾದ ಸಿ.ಎಚ್.ಸೂರ್ಯಪ್ರಕಾಶ್,ಬಿ.ವಿ.ಶ್ರೀನಿವಾಸ್ ಮೂರ್ತಿ,ಬಿ.ಎಂ.ನಾಗರಾಜಬೇದ್ರೆ,ಕೆ.ಚಿಕ್ಕಣ್ಣ,ಸೈಯದ್ ನೂರುಲ್ಲಾ,ಎಸ್.ವಿ.ಪ್ರಸನ್ನ,ಕೆ.ಪ್ರಕಾಶ್,ಚಂದ್ರಪ್ಪ,ಚಂಪಕಾ,ರಶ್ಮಿ,ಎಸ್.ತಿಮ್ಮಪ್ಪ ಇದ್ದರು. ವ್ಯವಸ್ಥಾ ಪಕ ಮಹಮದ್ ನಯೀಮ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net