

ಹಲಗೂರು: ಇಲ್ಲಿನ ಜೆಪಿಎಂ ಬಡಾವಣೆಯಲ್ಲಿ ಮನೆಯೊಂದ ಬೀಗ ಮುರಿದಿರುವ ಕಳ್ಳರು, ಚಿನ್ನ ಮತ್ತು ಲ್ಯಾಪ್‌ಟಾಪ್ ಕದೊಯ್ದಿದ್ದಾರೆ.
ಎಲ್ಐಸಿ ಏಜೆಂಟ್ ಜೆ.ವಿ.ರಮೇಶ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೀರುವಿನಲ್ಲಿ ಇಟ್ಟಿದ್ದ ಸುಮಾರು 90 ಗ್ರಾಂ ಚಿನ್ನ ಮತ್ತು ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದಾರೆ.
ಮನೆ ಮಾಲೀಕ ಜೆ.ವಿ.ರಮೇಶ್ ಕಾರ್ಯನಿಮಿತ್ತ ಚನ್ನಪಟ್ಟಣಕ್ಕೆ ತೆರಳಿದ್ದು, ಪತ್ನಿ ಜಯಮ್ಮ ಗುಂಡಾಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಶಾಲೆಗೆ ತೆರಳಿದ್ದರು.
ಗುರುವಾರ ಮಧ್ಯಾಹ್ನ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ಮನೆಯ ಬಾಗಿಲನ್ನು ಒಡೆದು ಬೀರುವಿನಲ್ಲಿದ್ದ ಲಾಂಗ್ ಸರ, ನಕ್ಲೇಸ್ ಮತ್ತು ಮೂರು ಜೊತೆ ಓಲೆ, ಒಂದು ಸುತ್ತು ಮಾಟಿ ಓಲೆ, ಮೂರು ಉಂಗುರಗಳನ್ನು ದೋಚಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳ ಪರಿಶೀಲಿಸಿದರು. ಬಳಿಕ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು, ತನಿಖೆ ಕೈಗೊಂಡಿದ್ದಾರೆ.